" LIC ನಲ್ಲಿ 5 ಲಕ್ಷ ಹೂಡಿಕೆ ಮಾಡಿ 100 ವರ್ಷದ ವರೆಗೆ ತಿಂಗಳಿಗೆ 2122 ಪಡೆದು ಜೀವನವನ್ನು ಶಾಂತಿಯಿಂದ ಕಳೆಯಿರಿ"

 

" LIC ನಲ್ಲಿ 5 ಲಕ್ಷ ಹೂಡಿಕೆ ಮಾಡಿ 100 ವರ್ಷದ ವರೆಗೆ ತಿಂಗಳಿಗೆ 2122 ಪಡೆದು ಜೀವನವನ್ನು ಶಾಂತಿಯಿಂದ ಕಳೆಯಿರಿ"



ಬೆಂಗಳೂರು 20/01/2022:- ಎಲ್‌ಐಸಿ ಹೊಸ ಜೀವನ್ ಶಾಂತಿ ಪಾಲಿಸಿಯನ್ನು ಆರಂಭಿಸಿದೆ. ಈ ಪಾಲಿಸಿಯ ದೊಡ್ಡ ವೈಶಿಷ್ಟ್ಯವೆಂದರೆ ಅದರಲ್ಲಿ ಲಭ್ಯವಿರುವ ಪಿಂಚಣಿ.  ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿದರೆ, ಜೀವನಪೂರ್ತಿ ಮಾಸಿಕ ಪಿಂಚಣಿ (Life long pension) ಪಡೆಯಬಹುದು. ಅಂತಹ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ತನ್ನ ನಿವೃತ್ತಿಯ ನಂತರ ಖರ್ಚುಗಳನ್ನು ಸುಲಭವಾಗಿ ಪೂರೈಸಬಹುದು.ಉದಾಹರಣೆಗೆ

ತಾವೇ ಕಟ್ಟಿ ಬೆಳೆಸಿದ ರೇಮಂಡ್ಸ್ ಸಂಸ್ಥೆಯಿಂದಲೇ  ಮುಖ್ಯಸ್ಥ ವಿಜಯಪಥ ಸಿಂಘಾನಿಯಾ ಅವರನ್ನು ತಮ್ಮ ಸ್ವಂತ ಮಕ್ಕಳೆ ಅವರ ಆಸ್ತಿ ಎಲ್ಲಾ ಪಡೆದು ಮನೆಯಿಂದ ಹೊರ ಹಾಕಲಾಗಿದೆ. ಈ ಇಳಿ ವಯಸ್ಸಿನಲ್ಲಿ ಅವರು ತಮ್ಮ ಮಿತ್ರರ ಸಹಾಯದಿಂದ ಜೀವನ ಸಾಗಿಸುತ್ತಿದ್ದಾರೆ.  ಆದ್ದರಿಂದ ಉತ್ತಮ ಸಂಪಾದನೆ ಇದ್ದ ಸಮಯದಲ್ಲಿ  ನಿವೃತ್ತಿ ಯೋಜನೆಗಳಲ್ಲಿ ಹಣ ತೊಡಗಿಸಿದ್ದರೆ ಅವರು ವೃದ್ಧಾಪ್ಯದ ದಿನಗಳನ್ನು ನೆಮ್ಮದಿಯಿಂದ  ಶಾಂತಿಯಿಂದ ಕಳೆಯಬಹುದಾಗಿತ್ತು. ಇದು ಒಂದು ಉದಾಹರಣೆಯಷ್ಟೇ. ಈ ಥರ ಸಾವಿರಾರು ವೃದ್ದ  ತಂದೆ - ತಾಯಿಯರು ಅನುಭವಿಸುತ್ತದ್ದಾರೆ. ಇಂತಹ ಪರಿಸ್ಥಿತಿಯು ಯಾರ ಬದುಕಿನಲ್ಲು ಬರಬಾರದು ಎಂಬ ಉದ್ದೇಶದಿಂದ ಈ ಜೀವನ ಶಾಂತಿ ಎಂಬ ಪಾಲಿಸಿಯನ್ನು ಎಲ್.ಐ.ಸಿ ತರಲಾಗಿದೆ. 



ನೀವು ದುಡಿಮೆಯ ದಿನಗಳಲ್ಲಿ ಗಳಿಸಿದ ಆದಾಯದಿಂದ ಸ್ಥಿರಾಸ್ತಿ ಅಥವಾ ವ್ಯಾಪಾರ ವಹಿವಾಟು ವಿಸ್ತಾರದಲ್ಲಿಯೇ ಎಲ್ಲಾ ಮೊತ್ತವನ್ನು ತೊಡಗಿಸುವ ಬದಲು ವೃದ್ಧಾಪ್ಯದಲ್ಲಿ ನಿರಂತರ ಹಾಗೂ ನಿಗದಿತ ಆದಾಯ ಪಡೆಯಲು ನಿವೃತ್ತಿ ಯೋಜನೆಗಳಲ್ಲಿ ಹಂತ ಹಂತವಾಗಿ ಅಥವಾ ಏಕಕಂತಿನಲ್ಲಿ ಉಳಿತಾಯ ಮಾಡಿದರೆ ಹಲವಾರು ಪ್ರಯೋಜನಗಳು ಮತ್ತು ಉಪಯೋಗಗಳಿವೆ. ತಕ್ಷಣಕ್ಕೆ ಅಥವಾ ಮುಂದೂಡಿದ ದಿನಗಳಲ್ಲಿ ಪಿಂಚಣಿ ಪಡೆಯುವ ಯೋಜನೆಗಳಲ್ಲಿ ಹೂಡಿಕೆ ಮಾಡಲು ಮರೆಯಬಾರದು.

ಹಾಗಾಗಿ ನಿರ್ದಿಷ್ಟ  ಆದಾಯ ಇಲ್ಲದ ಮುಪ್ಪಿನ ದಿನಗಳಲ್ಲಿ ಮಾಸಿಕ ನಗದು ಆದಾಯ ಅನಿವಾರ್ಯ. ವ್ಯಕ್ತಿಯ ದುಡಿಯುವ ಸಾಮರ್ಥ್ಯ ಕಡಿಮೆಯಾದಾಗಲೂ ಉತ್ತಮ ಜೀವನ ನಡೆಸಲು  ಉತ್ತಮ ಆರೋಗ್ಯ ಇರುವುದರ ಜತೆಗೆ ಸಾಕಷ್ಟು ಆರ್ಥಿಕ ಭದ್ರತೆಯೂ ಇರಬೇಕಾಗುತ್ತದೆ. ಇವತ್ತಿನ ದಿನಗಳಲ್ಲಿ ವೈದ್ಯಕೀಯ ವೆಚ್ಚ ತುಂಬಾ ದುಬಾರಿಯಾಗಿದೆ. ವೈದ್ಯಕೀಯ ರಂಗದಲ್ಲಿ ಆಗುತ್ತಿರುವ ಸುಧಾರಣೆಗಳಿಂದ ಜೀವಿತಾವಧಿ  ಜೊತೆಗೆ ಆರ್ಥಿಕ ಹೊರೆವು( ವೆಚ್ಚವು)   ಹೆಚ್ಚುತ್ತಿದೆ.  ಅದಕ್ಕೊಸ್ಕರ ನೀವು ಆರ್ಥಿಕವಾಗಿ ಸದೃಢರಾಗಿದ್ದಲ್ಲಿ, ನಿಮ್ಮ ಆದಾಯದ ಒಂದು ಭಾಗವನ್ನು ವೈದ್ಯಕೀಯ ವೆಚ್ಚಕ್ಕಾಗಿ ಮೀಸಲಿಟ್ಟರೂ ಸಹ  ಗೌರವಾನ್ವಿತ ಜೀವನ ನಡೆಸಲು ಸಾಧ್ಯವಾಗುತ್ತದೆ.


ನಿರಂತರ, ಖಚಿತ ಹಾಗೂ ನಿರ್ದಿಷ್ಟವಾದ ಅವಧಿಯಿಂದ ಪಿಂಚಣಿ ಪಡೆಯುವ ಯೋಜನೆ ಯಾವುದಾದರೂ ಇದೆಯೇ ಎಂಬ ಪ್ರಶ್ನೆಗೆ, ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಇತ್ತೀಚೆಗೆ ಆರಂಭಿಸಿರುವ  ’ಜೀವನ ಶಾಂತಿ’ ಯೋಜನೆಯೇ ತುಂಬಾ ಸೂಕ್ತ ಪೆನ್ಸನ್  ಪಾಲಿಸಿ ಆಗಿದೆ.



ನಿವೃತ್ತಿಯ ಬದುಕಿದೆ ನಿರಂತರ ಖಚಿತ ಆದಾಯ ನೀಡುವ ಭರವಸೆಯನ್ನು ಈ ಯೋಜನೆ ನೀಡುತ್ತದೆ.  ಹೆಸರೇ ಸೂಚಿಸುವಂತೆ ‘ಜೀವನ ಶಾಂತಿ’ (ಯೋಜನೆ ಸಂಖ್ಯೆ 858) ಈ ಯೋಜನೆಯು ಖಚಿತ, ನಿರ್ದಿಷ್ಟ ಹಾಗೂ ನಿರಂತರ ಪಿಂಚಣಿ ನೀಡುವ ಯೋಜನೆಯಾಗಿದೆ.


ಏಕ ಕಂತಿನಲ್ಲಿ ಹಣ ಪಾವತಿ


ತಕ್ಷಣ (Immediate Pension) ಅಥವಾ ಮುಂದೂಡಿದ ದಿನದಿಂದ (Deferred Pension) ಪಿಂಚಣಿ  ಸೌಲಭ್ಯ. ಮುಂದೂಡಿದ ಪಿಂಚಣಿಯನ್ನು 1 ರಿಂದ 20ವರ್ಷಗಳವರೆಗೆ ಮುಂದೂಡಬಹುದು.


ತಕ್ಷಣ ಪಿಂಚಣಿ ಪಡೆಯಲು  10 ವಿಧದ ಆಯ್ಕೆಗಳಿವೆ. ಅವುಗಳಲ್ಲಿ ‘ಎಫ್’ ಆಯ್ಕೆ ಅತ್ಯುತ್ತಮವಾಗಿದೆ.


ಮುಂದೂಡಿದ ಪಿಂಚಣಿಯಲ್ಲಿ ಒಬ್ಬರಿಗೆ ಅಥವಾ ಜಂಟಿ ಪಿಂಚಣಿಯಾಗಿ ಇಬ್ಬರೂ ಪಿಂಚಣಿದಾರರಿಗೆ ಜೀವನ ಪರ್ಯಂತ ಶೇ 100 ರಷ್ಟು  ಪಿಂಚಣಿ ದೊರೆಯುತ್ತದೆ. ಇಲ್ಲಿ ಶೇ 9 ರಿಂದ ಶೇ 21ರ ದರದಲ್ಲಿ ಪಿಂಚಣಿ ದೊರೆಯುತ್ತದೆ. ಪಿಂಚಣಿಯನ್ನು ವಾರ್ಷಿಕ, ಅರ್ಧ ವಾರ್ಷಿಕ, ತ್ರೈಮಾಸಿಕ ಅಥವಾ ಮಾಸಿಕವಾಗಿ ಪಡೆಯಲು ಅವಕಾಶ ಇದೆ. 30 ವರ್ಷ ಪೂರ್ಣಗೊಳಿಸಿದವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಕನಿಷ್ಠ ಹೂಡಿಕೆ ₹1.50 ಲಕ್ಷ. ಗರಿಷ್ಠ ಹೂಡಿಕೆಗೆ  ಮಿತಿ ಇಲ್ಲ.



ಈ ಪಾಲಿಸಿಯ ಪ್ರಯೋಜನಗಳು 


1)  ಸಾಲ ಸೌಲಭ್ಯ :- ಎಫ್ ಮತ್ತು ಜೆ ವಿಧಗಳಲ್ಲಿ ಸಾಲ ಸೌಲಭ್ಯವಿದೆ. ಹೂಡಿಕೆಯ ಒಂದು ವರ್ಷದ ನಂತರ ಸಾಲವನ್ನು ಪಡೆಯಬಹುದು.


2).ಸರೆಂಡರ್: ಹೂಡಿಕೆ ಮಾಡಿದ 3 ತಿಂಗಳ ನಂತರ ತಮಗೆ ಇಚ್ಛೆ ಇಲ್ಲದಿದ್ದರೆ ಸರೆಂಡರ್ ಮಾಡಲು ಅವಕಾಶವಿದೆ.


ಉದಾಹರಣೆ: 35 ವರ್ಷ ವಯಸ್ಸಿನ ವ್ಯಕ್ತಿ ₹5ಲಕ್ಷ ಮೊತ್ತವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಇಚ್ಛಿಸಿದ್ದರೆ, ಏಕ ಕಂತಿನಲ್ಲಿ ಜಿ.ಎಸ್.ಟಿ. ಸೇರಿ

₹203600  ಪ್ರಿಮಿಯಂ ಪಾವತಿಸಬೇಕು. ಒಂದು ವರ್ಷದ ನಂತರ ತಿಂಗಳ 2122 ರಂತೆ ವರ್ಷಕ್ಕೆ 26600 ರೂಪಾಯಿಯನ್ನು ಮುಂದಿನ 75  ವರ್ಷಗಳ ವರಿಗು ಪಡಿಯುತ್ತೀರಾ.  


1) ತಕ್ಷಣ ಪಿಂಚಣಿ ಬಯಸಿದಲ್ಲಿ ‘ಎಫ್’ ಆಯ್ಕೆ ಮಾಡಿಕೊಳ್ಳಬೇಕು. ಇದರಲ್ಲಿ ವಾರ್ಷಿಕ ಪಿಂಚಣಿ ಬಯಸಿದಲ್ಲಿ ₹26600. ಮಾಸಿಕ ಪಿಂಚಣಿ ಬಯಸಿದಲ್ಲಿ 2122 ₹ ದೊರೆಯುತ್ತದೆ.


ಆಯ್ಕೆ ಮಾಡಿದ ವಿಧಾನದಲ್ಲಿ  ಜೀವನ ಪರ್ಯಂತ ಪಿಂಚಣಿ ಪಡೆಯಬಹುದು. ಪಿಂಚಣಿದಾರರ ಕಾಲಾನಂತರ ₹5 ಲಕ್ಷವನ್ನು   ವಾರಸುದಾರರಿಗೆ ಮರಳಿಸಲಾಗುವುದು

2) ಮುಂದೂಡಿದ ಪಿಂಚಣಿ: 12 ವರ್ಷಗಳ ಅವಧಿಗೆ ಮುಂದೂಡಿದರೆ ಅಂದರೆ ಪಿಂಚಣಿದಾರನಿಗೆ 47  ವರ್ಷ ವಯಸ್ಸಾದ ನಂತರ  ಪಿಂಚಣಿ ಪಡೆಯುವುದು.


ವಾರ್ಷಿಕ ಪಿಂಚಣಿ  ₹47100  ಮತ್ತು ಮಾಸಿಕ  ಪಿಂಚಣಿ ₹3762 ದೊರೆಯುತ್ತದೆ. ಅವರ ಕಾಲಾನಂತರ ನಾಮಿನಿಗೆ ಅಥವಾ ವಾರಸುದಾರರಿಗೆ ಶೇ.110 ರಷ್ಟು ಪರ್ಚೇಜ್ ಪ್ರೈಸ್ ಅಥವಾ ಪರ್ಚೇಜ್ ಪ್ರೈಸ್ ಮತ್ತು ಒಟ್ಟುಗೂಡಿದ ಖಚಿತ ಸೇರ್ಪಡೆಯಲ್ಲಿ ಅವರ ಅವಧಿಯವರೆಗೆ ನೀಡಿದ ಪಿಂಚಣಿಯನ್ನು ಕಳೆದ ಮೊತ್ತ. ಇವುಗಳಲ್ಲಿ ಯಾವುದು ಹೆಚ್ಚು ಆ ಮೊತ್ತವನ್ನು ನೀಡುತ್ತಾರೆ.


ಮುಂದೂಡಿದ ಪಿಂಚಣಿಯಲ್ಲಿ ಎರಡು ಸಂಗತಿಗಳನ್ನು ಗಮನಿಸಬೇಕು. ಪಿಂಚಣಿ ಪ್ರಾರಂಭವಾಗುವ ಮೊದಲು ಪಿಂಚಣಿದಾರ ಮೃತರಾದರೆ ಅಥವಾ ಪಿಂಚಣಿ ಪ್ರಾರಂಭದ ನಂತರ ಪಿಂಚಣಿದಾರ ಮೃತರಾದರೆ ಸಿಗುವ ಸೌಲಭ್ಯಗಳೇನು ಎನ್ನುವುದನ್ನೂ ತಿಳಿದುಕೊಳ್ಳಬೇಕು.


ಪಿಂಚಣಿ ಪ್ರಾರಂಭವಾಗುವ ಮೊದಲೇ ಪಿಂಚಣಿದಾರ ಮೃತರಾದರೆ, 12 ವರ್ಷ ಮುಂದೂಡಿದ ಪಿಂಚಣಿ ಅವಧಿಯಲ್ಲಿ ಅಕಸ್ಮಾತ್ ಹೂಡಿಕೆ ಮಾಡಿದ 6 ವರ್ಷಗಳ ನಂತರ ಮೃತರಾದರೆ, ವಿಮೆ ಮೊತ್ತ ಮತ್ತು 6  ವರ್ಷಗಳ ಪಿಂಚಣಿಯನ್ನು ಒಟ್ಟಾಗಿ ವಾರಸುದಾರರಿಗೆ ನೀಡಲಾಗುತ್ತದೆ. ಪಿಂಚಣಿ ಪ್ರಾರಂಭದ ನಂತರ ಪಿಂಚಣಿದಾರ ಮೃತಪಟ್ಟ ಸಂದರ್ಭದಲ್ಲಿ, ವಾರಸುದಾರರಿಗೆ ನಿಯಮಾನುಸಾರ ನೀಡಬೇಕಾದ ಮೊತ್ತದಲ್ಲಿ ಅಲ್ಲಿಯವರೆಗೆ ಪಡೆದ ಪಿಂಚಣಿ ಕಳೆದು ನೀಡಲಾಗುತ್ತದೆ.


ಈ ಎಲ್ಲಾ ಭರವಸೆಗಳನ್ನು ಪಾಲಿಸಿ ಬಾಂಡ್‌ನಲ್ಲಿಯೇ ಸ್ಪಷ್ಟವಾಗಿ ನಮೂದಿಸಲಾಗಿರುತ್ತದೆ. ಈ ಎಲ್ಲ ಕಾರಣಕ್ಕೆ ಇದೊಂದು ಖಚಿತ, ನಿರಂತರ ಹಾಗೂ ನಿರ್ದಿಷ್ಟವಾಗಿ ಪಿಂಚಣಿ ನೀಡುವ ಯೋಜನೆಯಾಗಿದೆ. ನಿವೃತ್ತಿಯ ಬದುಕಿಗೆ ಸ್ವಲ್ಪವಾದರೂ ಉಳಿತಾಯ ಮಾಡಿ ನಿಶ್ಚಿಂತ  ಮತ್ತು ನರಮ್ಮದಿಯಾಗಿ ಬದುಕಿ.



ನಿಮಗೆ ಈ ಪಾಲಿಸಿ ಮಾಡಿಸಲು ಇಷ್ಟಾದ್ರೆ  ಹಾಗು ಏನೇ ವಿಚಾರಣೆಗೆ ಈ ಕೆಳಗಿನ ನಂಬರ್ ಗೆ ( ಪೋನ್ ಮಾಡಿ)ಸಂಪರ್ಕಿಸಿ.

 ಎಲ್.ಐ.ಸಿ ಏಜೆಂಟ್  ಮಲ್ಲಿಕಾರ್ಜುನ. ಎನ್‌ 

( LIC Agent Mallikarjun . N)

8310160643.


 #JeevanShanti #Jeevanshabtipolicy. #ಜೀವನಶಾಂತಿ #LiciPolicy #Jeevanshanti858 #Lic #MAArjundoni #ArjundoniFilmMasters #DoniFilmMasters #PesionPolicy

Comments

Popular posts from this blog

"LIC ನಲ್ಲಿ ತಿಂಗಳಿಗೆ 60 ಸಾವಿರ ಕಟ್ಟಿ,2.24 ಕೋಟಿ ರೂಪಾಯಿ ಪಡೆಯಿರಿ"

Call me4 app| Best App TO YouTube Creators By ArjunDoni FilmMasters|You ...