"94 ನೇ ಸಾಲಿನ ಆಸ್ಕರ್ ಪ್ರಶಸ್ತಿ ಪಟ್ಟಿ ಬಿಡುಗಡೆ. ಭಾರತದ ಸಾಕ್ಷ್ಯಚಿತ್ರ ನಾಮನಿರ್ದೇಶನ "

 "94 ನೇ ಸಾಲಿನ ಆಸ್ಕರ್ ಪ್ರಶಸ್ತಿ ಪಟ್ಟಿ ಬಿಡುಗಡೆ. ಭಾರತದ ಸಾಕ್ಷ್ಯಚಿತ್ರ ನಾಮನಿರ್ದೇಶನ "



ಬೆಂಗಳೂರು :- ಸಿನಿ ಜಗತ್ತು ಕಾಯುವ ವಿಶ್ವದ ದುಬಾರಿ ಮತ್ತು ಪ್ರತಿಷ್ಠೆಯ  (ಅಕಾಡೆಮಿ ಅವಾರ್ಡ್ಸ್​)​ ಪ್ರಶಸ್ತಿ ಎಂದರೆ ಅದು ಆಸ್ಕರ್ ಪ್ರಶಸ್ತಿ. ಇಂಥ ಪ್ರಶಸ್ತಿಯನ್ನು ಜಗತ್ತಿನ ಪ್ರತಿಯೊಬ್ಬ ಸಿನಿಮಾದವನು ಪಡೆಯಬೇಕು ಎಂಬುದು  ದೊಡ್ಡ ಕನಸಾಗಿರುತ್ತೆ. ಆದರೆ ಆಸ್ಕರ್​ ಕಣದಲ್ಲಿ ಸ್ಪರ್ಧಿಸುವ ಅವಕಾಶ ಸಿಗುವುದು ಕೆಲವೇ ಕೆಲವು ಸಿನಿಮಾಗಳಿಗೆ ಮಾತ್ರ. ಈಗ  94ನೇ ಅಕಾಡೆಮಿ ಅವಾರ್ಡ್ಸ್​ ಸ್ಪರ್ಧೆಗಾಗಿ ಎಲ್ಲ ದೇಶಗಳಿಂದಲೂ ಸಿನಿಮಾಗಳನ್ನು ಕಳಿಸಲಾಗಿತ್ತು. ಭಾರತದಿಂದ ಕೂಡ ಒಂದು ಚಿತ್ರವನ್ನು ಆಯ್ಕೆ ಮಾಡಿ ಕಳಿಸಲಾಗಿದೆ. ಆ ಸಿನಿಮಾನೆ ತಮಿಳಿನ ‘ಕೂಳಾಂಗಲ್’ . ಈ ಸಿನಿಮಾ ಭಾರತವನ್ನು ಪ್ರತಿನಿಧಿಸಿತ್ತು.
ಮಲಯಾಳಂನ ‘ನಾಯಟ್ಟು’, ವಿದ್ಯಾ ಬಾಲನ್​ ನಟನೆಯ ‘ಶೇರ್ನಿ’, ಯೋಗಿ ಬಾಬು ಅಭಿನಯದ ತಮಿಳಿನ ‘ಮಂಡೆಲಾ’ ‘ಕೂಜಂಗಲ್’, ವಿಕ್ಕಿ ಕೌಶಲ್​ ನಟನೆಯ ‘ಉದ್ಧಮ್​’, ಅಸ್ಸಾಮಿ ಭಾಷೆಯ ‘ಬ್ರಿಡ್ಜ್​’, ಗುಜರಾತಿಯ ‘ಚೆಲ್ಲೋ ಶೋ’ ಸೇರಿದಂತೆ ಒಟ್ಟು 14 ಸಿನಿಮಾಗಳು ರೇಸ್​ನಲ್ಲಿದ್ದವು.
ಜ್ಯೂರಿ ಸದಸ್ಯರ ತಂಡ ಕೊಲ್ಕತ್ತಾದಲ್ಲಿ ಈ 14 ಸಿನಿಮಾಗಳನ್ನು ವೀಕ್ಷಿಸಿ, ಜ್ಯೂರಿ ತಂಡದ ಅಧ್ಯಕ್ಷರಾಗಿ ಖ್ಯಾತ ನಿರ್ದೇಶಕ ಶಾಜಿ ಎನ್​. ಕರಣ್​  ಅಂತಿಮವಾಗಿ ಆಸ್ಕರ್​ ಕಣದಲ್ಲಿ ಸ್ಪರ್ಧಿಸಲು ‘ಕೂಳಾಂಗಲ್’ ಚಿತ್ರವನ್ನು ಜಯಿಸುತ್ತು‌. ಈ ಸಿನಿಮಾ ಆಸ್ಕರ್ ಪ್ರಶಸ್ತಿ ಸುತ್ತಿಗೆ ನಾಮನಿರ್ದೇಶನವಾಗಲು ವಿಫಲವಾಗಿದೆ. ಈ ಸಿನಿಮಾನ
ಪಿ.ಎಸ್.ವಿನೋತ್ರಾಜ್ ನಿರ್ದೇಶನದ ಈ ಚಿತ್ರವು ಚಿಕ್ಕ ಹುಡುಗನ ಕಥೆಯನ್ನು ತೋರಿಸುತ್ತದೆ ಮತ್ತು ಅವನ ಹಿಂಸಾತ್ಮಕ ಮತ್ತು ಮದ್ಯವ್ಯಸನಿ ತಂದೆಯೊಂದಿಗಿನ ಅವನ ಒಡನಾಟದ ಭಾವನೆ ತನ್ನ ತಾಯಿಯನ್ನು ಮರಳಿ ಕರೆತರುವ ಅನ್ವೇಷಣೆಯಲ್ಲಿ ಅವನನ್ನು ಹೇಗೆ ಕರೆದೊಯ್ಯುತ್ತದೆ ಎಂಬುವ ಕಥಾ ವಸ್ತುವನ್ನು ಹೊಂದಿದೆ. ಈ  ಚಲನಚಿತ್ರವು ಈಗಾಗಲೇ ಚಲನಚಿತ್ರೋತ್ಸವಗಳಲ್ಲಿ ಹಲವಾರು ಪ್ರಶಸ್ತಿಗಳನ್ನ ಸಹ ಬಾಚಿಕೊಂಡಿತ್ತು.



ಆದರೆ ಭಾರತದ 'ರೈಟಿಂಗ್ ವಿಥ್ ಫೈರ್' ಎಂಬ ಸಾಕ್ಷ್ಯಚಿತ್ರ ಆಸ್ಕರ್‌ನ ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದು ಭಾರತೀಯರಲ್ಲಿ ಸ್ವಲ್ಪ ಸಂತಸ ಮೂಡಿಸಿದೆ.. ರೈಟಿಂಗ್ ವಿಥ್ ಫೈರ್(Writing With Fire) ಸಾಕ್ಷ್ಯಚಿತ್ರವನ್ನು ಸುಶ್ಮಿತಾ ಘೋಷ್, ರಿನು ಥಾಮಸ್ ನಿರ್ದೇಶನ ಮಾಡಿದ್ದು, ಉತ್ತರ ಪ್ರದೇಶದಲ್ಲಿ ದಲಿತ ಮಹಿಳೆಯರೇ ನಡೆಸುವ ಪತ್ರಿಕೆ ಕುರಿತಾದ ಸಾಕ್ಷ್ಯಚಿತ್ರ ಇದಾಗಿದ್ದು, ಪತ್ರಿಕೆ ಪ್ರಾರಂಭಕ್ಕೆ ಕಾರಣ, ವರದಿ ತರಲು ಅವರು ಪಡುವ ಕಷ್ಟಗಳು, ವರದಿಗಾರಿಕೆ ವಿಧಾನ. ವರದಿಗಾರ್ತಿಯರ ವೈಯಕ್ತಿಕ ಜೀವನ, ಆದರ್ಶ ಇನ್ನಿತರೆ ವಿಷಯಗಳ ಮೇಲೆ ಈ ಸಾಕ್ಷ್ಯಚಿತ್ರ ಕಥಾವಸ್ತುವನ್ನು ಒಳಗೊಂಡಿದೆ. ಇನ್ನು ರೈಟಿಂಗ್ ವಿತ್ ಫೈರ್' ಡಾಕ್ಯುಮೆಂಟರಿಯು ಆಸ್ಕರ್ ಪಡೆಯಲು 'ಅಸೆಶನ್', 'ಅಟ್ಟಿಕಾ', 'ಫ್ಲೀ', 'ಸಮ್ಮರ್ ಆಫ್ ಸೋಲ್' ಸಾಕ್ಷ್ಯಚಿತ್ರಗಳೊಟ್ಟಿಗೆ ಕಠಿಣ ಸ್ಪರ್ಧೆಗೆ ಒಳಪಡಬೇಕಿದೆ. ಆಸ್ಕರ್ಸ್‌ನಿಂದ ಗುರುತಿಸಲ್ಪಟ್ಟ ಡಾಕ್ಯುಮೆಂಟರಿ ವಿಭಾಗದ ಪರಿಣಿತರು ಈ ನಾಲ್ಕೂ ಡಾಕ್ಯುಮೆಂಟರಿಗಳನ್ನು ವೀಕ್ಷಿಸಿ ಮತ ಚಲಾಯಿಸುತ್ತಾರೆ. ಯಾವ ಡಾಕ್ಯುಮೆಂಟರಿ ಹೆಚ್ಚು ಮತ ಗಳಿಸುತ್ತದೆಯೋ ಆ ಡಾಕ್ಯುಮೆಮಂಟರಿಗೆ ಆಸ್ಕರ್ ನೀಡಲಾಗುತ್ತದೆ.

ಹಾಗೇ ಹಲವಾರು ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ. ಚಿತ್ರ ಗಳ ಪಟ್ಟಿ ಈ ರೀತಿ ಇವೆ‌.




ಆಸ್ಕರ್ 2022 ರ ಅತ್ಯುತ್ತಮ ಚಿತ್ರ ವಿಭಾಗದಲ್ಲಿ  ನಾಮ ನಿರ್ದೇಶನಗೊಂಡ ೧೦ ಚಿತ್ರಗಳು .
‘ಬೆಲ್‌ಫಾಸ್ಟ್‌’
‘ಕೊಡ’
‘ಡೋಂಟ್‌ ಲುಕ್‌ ಅಪ್‌’-‘ಡ್ರೈವ್‌ ಮೈ ಕಾರ್‌’
‘ಡುನ್‌’
‘ಕಿಂಗ್‌ ರಿಚರ್ಡ್‌’
‘ಲೈಕೋರೈಸ್ ಪಿಜ್ಜಾ’
‘ನೈಟ್‌ಮೇರ್‌ ಅಲಿ’
‘ದಿ ಪವರ್‌ ಆಫ್‌ ದಿ ಡಾಗ್‌’
‘ವೆಸ್ಟ್‌ ಸೈಡ್‌ ಸ್ಟೋರಿ’

2022 ಅತ್ಯುತ್ತಮ ನಿರ್ದೇಶಕ ನಾಮನಿರ್ದೇಶನಗೊಂಡ ನಿರ್ದೇಶಕರು
ಕೆನ್ನೆತ್ ಬ್ರನಾಗ್, ‘ಬೆಲ್‌ಫಾಸ್ಟ್’
ರುಸುಕೆ ಹಮಾಗುಚಿ, ‘ಡ್ರೈವ್ ಮೈ ಕಾರ್‌’
ಪಾಲ್ ಥಾಮಸ್ ಆಂಡರ್ಸನ್, ‘ಲೈಕೋರೈಸ್ ಪಿಜ್ಜಾ’
ಜೇನ್ ಕ್ಯಾಂಪಿಯನ್, ‘ದಿ ಪವರ್ ಆಫ್ ದಿ ಡಾಗ್’
ಸ್ಟೀವನ್ ಸ್ಪೀಲ್ಬರ್ಗ್, ‘ವೆಸ್ಟ್ ಸೈಡ್ ಸ್ಟೋರಿ’



2022ರ ಅತ್ಯುತ್ತಮ ನಟ ವಿಭಾಗಕ್ಕೆ ನಾಮನಿರ್ದೇಶನ ಗೊಂಡ ನಟರು
ಜೇವಿಯರ್ ಬಾರ್ಡೆಮ್, ‘ಬೀಯಿಂಗ್ ದಿ ರಿಕಾರ್ಡೋಸ್‘
ಬೆನೆಡಿಕ್ಟ್ ಕಂಬರ್ಬ್ಯಾಚ್, ‘ದಿ ಪವರ್ ಆಫ್ ದಿ ಡಾಗ್’
ಆಂಡ್ರ್ಯೂ ಗಾರ್ಫೀಲ್ಡ್, ‘ಟಿಕ್, ಟಿಕ್...ಬೂಮ್!’
ವಿಲ್ ಸ್ಮಿತ್, ‘ಕಿಂಗ್ ರಿಚರ್ಡ್’
ಡೆನ್ಜೆಲ್ ವಾಷಿಂಗ್ಟನ್, ‘ದಿ ಟ್ರ್ಯಾಜೆಡಿ ಆಫ್‌ ಮ್ಯಾಕ್‌ಬೆತ್‌’

ಅತ್ಯುತ್ತಮ ನಟಿ ವಿಭಾಗಕ್ಕೆ ನಾಮನಿರ್ದೇಶನಗೊಂಡ ನಟಿಯರು.
ಜೆಸ್ಸಿಕಾ ಚಸ್ಟೈನ್, ‘ದಿ ಐಸ್ ಆಫ್ ಟಮ್ಮಿ ಫಾಯೆ’
ಒಲಿವಿಯಾ ಕೋಲ್ಮನ್, ‘ದಿ ಲಾಸ್ಟ್ ಡಾಟರ್’
ಪೆನೆಲೋಪ್ ಕ್ರೂಜ್, ‘ಪ್ಯಾರ್ಲಲ್‌ ಮಧರ್‌’
ನಿಕೋಲ್ ಕಿಡ್ಮನ್, ‘ರಿಕಾರ್ಡೋಸ್ ಬೀಯಿಂಗ್’
ಕ್ರಿಸ್ಟನ್ ಸ್ಟೀವರ್ಟ್, ‘ಸ್ಪೆನ್ಸರ್’



ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್ ಚಿತ್ರದ ವಿಭಾಗಕ್ಕೆ ನಾಮನಿರ್ದೇಶನಗೊಂಡ ಚಿತ್ರಗಳು.

ಡ್ರೈವ್ ಮೈ ಕಾರ್(ಜಪಾನ್)

ಫ್ಲೀ (ಡೆನ್ಮಾರ್ಕ್)

ದಿ ಹ್ಯಾಂಡ್ ಆಫ್ ಗಾಡ್ (ಇಟಲಿ)

ಲುನಾನಾ: ಎ ಯಾಕ್ ಇನ್ ದಿ ಕ್ಲಾಸ್ ರೂಮ್ (ಭೂತಾನ್)

ದಿ ವರ್ಸ್ಟ್ ಪರ್ಸನ್ ಇನ್​ ದಿ ವರ್ಲ್ಡ್ (ನಾರ್ವೆ)

ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗಕ್ಕೆ ನಾಮನಿರ್ದೇಶನಗೊಂಡ ಚಿತ್ರಗಳು.

ಅಸೆನ್ಶನ್

ಅಟ್ಟಿಕಾ

ಫ್ಲೀ

ಸಮ್ಮರ್ ಆಫ್ ಸೋಲ್

ರೈಟಿಂಗ್ ವಿತ್ ಫೈರ್



ಹೀಗೆ ಅತ್ಯುತ್ತಮ ಚಿತ್ತಕಥೆ,  ಅತ್ಯುತ್ತಮ ಮೂಲ ಚಿತ್ರಕಥೆ, ಅತ್ಯುತ್ತಮ ಮೂಲ(ಒರಿಜಿನಲ್) ಸಂಗೀತ,ಅತ್ಯುತ್ತಮ ಛಾಯಾಗ್ರಾಹಕ, ಅತ್ಯುತ್ತಮ ಎಡಿಟರ್, ಅತ್ಯುತ್ತಮ ಡಿಸೈನರ್, ಅತ್ಯುತ್ತಮ ಪೋಷಕಕಲಾವಿದರು ಇನ್ನೂ ಅನೇಕ ವಿಭಾಗದಲ್ಲಿ ೯೫ ನೇ ಆಸ್ಕರ್‌ ಅಕಾಡೆಮಿ ಅವಾರ್ಡ್ಸ್ ಪಡೆದ ಲೀಸ್ಟ್ ಅನ್ನು
ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಅಂಡ್ ಸೈನ್ಸ್‌ ತಮ್ಮ ಅಧಿಕೃತ ಆಫಿಯಲ್ ವೆಬ್ಸೈಟ್ ಮತ್ತು ಟ್ವಿಟರ್ ಖಾತೆಯಲ್ಲಿ ಬಿಡುಗಡೆ ಗೊಳಿಸಿದೆ.ಹಾಗೂ
ಬಹು ನಿರೀಕ್ಷಿತ  ಆಸ್ಕರ್ ಪ್ರಶಸ್ತಿಯ ವಿತರಣಾ ಸಮಾರಂಭ ಮಾರ್ಚ್ 27 ರಂದು ನಡೆಯಲಿದೆ.

ಎಂ.ಎ.ಅರ್ಜುನ್ ಡೋಣಿ( ಸಿನಿಮಾ ಬರಹಗಾರ)

ಫಿಲ್ಮ್ ಸ್ಕ್ರಿಪ್ಟ್ ರೈಟರ್ ಅಂಡ್ ಅನಾಲಿಸ್ಟ್

Comments

Popular posts from this blog

"LIC ನಲ್ಲಿ ತಿಂಗಳಿಗೆ 60 ಸಾವಿರ ಕಟ್ಟಿ,2.24 ಕೋಟಿ ರೂಪಾಯಿ ಪಡೆಯಿರಿ"

Call me4 app| Best App TO YouTube Creators By ArjunDoni FilmMasters|You ...