ಫೇಲೂರಾದ ನಾಯಕನ ಪ್ಯಾಥೊ ಸಾಂಗ್


 ಫೇಲೂರಾದ ನಾಯಕ ಕುಡಿದು ಹೇಳುವುನು:ನಂತರ ಸ್ನೇಹಿತರು ಒಂದೊಂದು ಲೈನ್ ಹೇಳ್ತಾರೆ,
ಪ್ರೀತಿ ತಿಪ್ಪೆಗಂಡಿ ರೀತಿ ,
ಲವ್ ಫೇಲೂರ್ಗಿಲ್ಲ ನೀತಿ,
ಲವ್ ಮಾಡ್ದೋನೆ ಜಗತ್ತಿನಲ್ಲಿ ಪಾಪಿ, 
ದಯವಿಟ್ಟು ನನ್ನ ಮಾತು ಕೇಳಿ, 
ಪ್ರೀತಿನಾ ಮಾಡ್ಲೇ ಬೇಡಿ. ಮಾಡಿದ್ರೆ, ಬಾರಿಗೆ ಬರೋದು ಗ್ಯಾರಂಟಿ,

ಹುಡ್ಗೀರ್ ಪ್ರೀತಿ(ಹಾರ್ಟು) ತುಂಬಾ ಕಾಸ್ಟು ,
ಮಾಡ್ದೋನ್ ಮಾತ್ರ ಗ್ಯಾರಂಟಿ ಹೂಸ್ಟು ,
ಹುಡುಗರ್ ಪ್ರೀತಿ(ಹಾರ್ಟು) ತೂಬಾ ಸ್ವೀಟು ,
ಪಡ್ದೋರ್ ಮಾತ್ರ ವ್ಯಾರಂಟಿ ಫಿಕ್ಸು ,
ಪ್ರೀತಿ ಎಂಬುದೇ ಹುಳ,
ಅದಕ್ಕೆ ಹುಡ್ಗೀರೇ ಗಾಳ,
ಒಳಬಿಟ್ಕೊಂಡ್ ಬಿಟ್ರೆ ನಾವು
ನಮ್ ಮೈಯಗೆಲ್ಲಾ ಗಾಯ, 
ಕೈ ಕೊಟ್ಟು ಹೋದ್ರ ಅವ್ರು ನಮ್ ಮನಸ್ಸೆಲ್ಲಾ ಮಾಯ,   
                                 (ಪಲ್ಲವಿ)
ಹುಡ್ಗೀರ್ ಮನಸ್ಸಗಿಲ್ಲಾ ಒಂಚೂರ್ ನಿಯತ್ತು,
ಹುಡ್ಗೂರ್ ಮನಸ್ಸು ಒಂದು ಸಂಪತ್ತು,
ಲವ್ ಫೇಲೂರ್ ಗಿಲ್ಲಾ ಒಂದು ಟ್ಯಾಬ್ಲೆಟು,
ಕಂಡ್ಹಿಡಿದೋನ್ಗೆ ಕೊಡ್ಬೇಕೊಂದು ಅವಾರ್ಡು,  ( ಅನು ಪಲ್ಲವಿ)

ಹುಡ್ಗೀರ್ ಪ್ರೀತಿ(ಹಾರ್ಟು) ತುಂಬಾ ಕಾಸ್ಟು ,
ಮಾಡ್ದೋನ್ ಮಾತ್ರ ಗ್ಯಾರಂಟಿ ಹೂಸ್ಟು ,
ಹುಡುಗರ್ ಪ್ರೀತಿ(ಹಾರ್ಟು) ತೂಬಾ ಸ್ವೀಟು ,
ಪಡ್ದೋರ್ ಮಾತ್ರ ವ್ಯಾರಂಟಿ ಫಿಕ್ಸು ,
ಪ್ರೀತಿ ಎಂಬುದೇ ಹುಳ,
ಅದಕ್ಕೆ ಹುಡ್ಗೀರೇ ಗಾಳ,
ಒಳಬಿಟ್ಕೊಂಡ್ ಬಿಟ್ರೆ ನಾವು
ನಮ್ ಮೈಯಲ್ಲಾ ಗಾಯ, 
ಕೈ ಕೊಟ್ಟು ಹೋದ್ರ ಅವ್ರು ನಮ್ ಮನಸ್ಸೆಲ್ಲಾ ಮಾಯ,   
                                                                                  (ಪಲ್ಲವಿ)
ಇತಿಹಾಸ ತಿರುವಿ ನೋಡಿದ್ರೆ ನೀವು,
ಪ್ರೀತಿಗೆ ಉಡುಗೊರೆ ನೀಡ್ದವ್ರೆ ನಾವು
ಹುಡ್ಗೀರ್ ಕೊಡಗೆ ಶೂನ್ಯ ಕೇಳಿ ನೀವು, 
ಹುಡುಗರ್ ಪ್ರೀತಿನೇ ತುಂಬಾ ಸ್ಟ್ರಾಂಗು,
ಹುಡಗರ್ ಹಾರ್ಟು ಒಂದು ಸ್ಲೇಟು ಬಳಪ,
ಬರಿಯೋದು ಮಾತ್ರ ನಮ್ ಪ್ರೇಮ ಬರಹ   ..... (ಚರಣ-೧)

 ನಿಮ್ ಪ್ರೀತಿ ಪಡ್ಯೋಕೆ ಅಲ್ದು ಅಲ್ದು ,
ನಮ್ ಮನಸ್ಸನಿಮ್ಗೆ  ಹಡಿಡ್ತೀವಿ ನಾವು ,
ಹುಡುಗ ಎಂಥವ್ನಿರಲಿ ತಪ್ಪೇನೆ ಮಾಡಿಲ್ರಿ ಅವ್ನು , 
ನಿನ್ನ ಪ್ರೀತಿ ಮಾಡ್ತೀನೆಂದು ಹೇಳೋರು ನೀವು,
ಪ್ರೀತಿ ಮಾಡದ್ಮೇಲೆ ನೀ ಮೋಸಗಾರಂದ್ರೂ ,
ನೀನೇ ಬೇಕು ನೀನೇ ಪ್ರಾಣ ಅನ್ನೋರು ನಾವು....       
                                                                        (ಚರಣ-೨)

Comments

Popular posts from this blog

"LIC ನಲ್ಲಿ ತಿಂಗಳಿಗೆ 60 ಸಾವಿರ ಕಟ್ಟಿ,2.24 ಕೋಟಿ ರೂಪಾಯಿ ಪಡೆಯಿರಿ"

Call me4 app| Best App TO YouTube Creators By ArjunDoni FilmMasters|You ...