ಪ್ರೇಮಿಗಳ ನಿಜವಾದ ಪ್ರೀತಿಯ ಬಗ್ಗೆ ಸಾಂಗ್
- Get link
- X
- Other Apps
ಗುಬ್ಬಚ್ಚಿ ಹಕ್ಕಿ ಗಳು ( ಪ್ರೇಮಿ ಗಳು) ಊರು ಬಿಟ್ಟು ಹೊಂಟೌವ್ರೆ,
ಮೈತುಂಬ ಪ್ರೀತಿ ಬೆರಿಸ್ಕೊಂಡು ಹೋಗ್ತೌವ್ರೆ,
ಎರಡು ಹೃದಯ ಜೀವ ಒಂದೇ,
ಎರಡು ಮನಸ್ಸು ಭಾವ ಒಂದೇ
ಇವರ ಜೀವದಭಾವಕೆ(ಪ್ರೀತಿ ಗೆ)
ಮನೆ ದೇವ್ರು,
ಊರಹೊರಗಿನ ಮಾರಮ್ಮ ಶುಭಕೋರಿ ಹಾರೃಸೌವ್ಳೆ,
ತಮ್ಮೊಳಗಿನ ಪ್ರೇಮಮ್ಮ ಹರಿಸಿ
ಸ್ಪೋರ್ತಿ ತಂಬೌವ್ಳೆ, ...
ಪಲ್ಲವಿ
ಚರಣ-೧
ಹಂಗಿನಅರಮನೆಯ ಬೇಕಿಲ್ಲ ಇವ್ರ್ಗೆ ,
ಕನಸಿನ(ಗುಡಿಸಲು) ಮನೆ ಸಾಕು ಬಾಳೋಕೆ ಇವ್ರ್ಗೆ,
ಊರೂರು ಸುತ್ತುತ್ತಾ ತಮ್ಮನ್ನ ತಾವೆ ಮರಿತವ್ರೆ ,
ಜಾತ್ರೆ ಯ ತುಂಬಾ ಪ್ರೀತಿ ಚೆಲ್ಲುತಾ ಅಲೆತೌವ್ರೆ,
ಬೇದ ಭಾವ ಗೊತ್ತಿರದ ಮುಗ್ದರು ಇವ್ರು ,
ಯಾವ ಜನ್ಮದ ಋಣವು ಪ್ರೀತಿ ಸಿಕೈತೆ ಇವರ್ಗೆ,
ಭಗವಂತನೆ ಮೆಚ್ಚಿ ಸೇರಸವ್ನೇನೊ ಇವರ್ನ,
ಇಬ್ರೂ ಒಂದಾಗವ್ರೆ ಪ್ರೀತಿ ನೇ ದೇವ್ರು ಅಂದ್ಕೊಂಡವ್ರೆ,
ಚರಣ-೨
ಕನಸಿನ ಮೂಟೆನಾ ಹೊತ್ತುಕೊಂಡು ಬಂದವ್ರೆ,
ಮುದ್ದಾದ ಮನಸ್ಸು ಗಳು ಬಂಧಾನ ಬೆಸಿದೈತೆ,
ಅಪ್ಪ ಅಮ್ಮ ನ ಬಿಟ್ಟ್ ಬಿಟ್ಟು ಬಂದ್ರೂನು,
ಅಪ್ಪ ಅಮ್ಮನ ಇವನಲ್ಲೆ ಕಂಡವ್ಳೆ ಇವ್ಳು ,
ಬಂಧು -ಮಿತ್ರರು ಯಾರು ಇಲ್ಲದಿದ್ದರೂನು ,
ಬಂಧು- ಬಾಂದವರೆಲ್ಲ ಇವಳೇ ಇವನ್ಗೆ,
ಇಬ್ರೂ ಜೊತೆಗಾಗವ್ರೆ ,
ಪ್ರೀತಿ ನೇ ದೈವ ಅಂದ್ಕೊಂಡವ್ರೆ, .,..
- Get link
- X
- Other Apps
Comments
Post a Comment