" ಚಿತ್ರ ಬ್ರಹ್ಮ ನನ್ನು ಮರೆತ ಕನ್ನಡ ಚಿತ್ರರಂಗ "

 

" ಚಿತ್ರ ಬ್ರಹ್ಮ ನನ್ನು ಮರೆತ ಕನ್ನಡ ಚಿತ್ರರಂಗ "


    ಅವರಿಗೊಂದು ಸರಿಯಾದ ನೆಲೆ ಬೆಲೆ ಕೊಟ್ಟಿಲ್ಲಾ ,ಅವರು ನಿರ್ದೇಶನ ಮಾಡಿ ಬೆಳ್ಳಿತೆರೆಗೆ ತಂದ ನಾಯಕರಿಗೆ ಅಪಾರ ಗೌರವ, ಸ್ಮಾರಕ ಗಳನ್ನು ನಿರ್ಮಿಸಲು ಹೋರಾಡಿದಕನ್ನಡ ಚಿಂತ್ರರಂಗದ ದಿಗ್ಗಜರು ಅವರಿಗೆ ನಿರ್ಮಿಸಿದರು. ಸರ್ಕಾರ ಸಹ ಎಲ್ಲಾವನ್ನು ಕೊಟ್ಟಿತು ,ಆದರೆ ಅನೇಕ ನಾಯಕನಟರನ್ನು ,ನಟಿಯರನ್ನು ಬೆಳ್ಳಿತೆರೆಗೆ ಪರಿಚಯಿಸಿ ,ಅಧ್ಬುತ ಸಿನಿಮಾಗಳನ್ನು ನಿರ್ದೇಶಿಸಿ ಕನ್ನಡ ಚಿತ್ರರಂಗವನ್ನು ಇಡೀಭಾರತೀಯ ಚಿತ್ರ ರಂಗದಲ್ಲಿ ಉತ್ತುಂಗಕ್ಕೆ ಏರಿಸಿದ ಒಬ್ಬ ನಿರ್ದೇಶಕನಿಗೆ ಒಂದು ಸ್ಮಾರಕ ಇಲ್ಲಾ ,ಅವರನ್ನು ನೆನಪು ಇಟ್ಟುಕೊಳ್ಳಲು ಯಾವ ಕೆಲಸಗಳು ನಡಿದಿಲ್ಲಾ ನಡಿತ್ತಿಲ್ಲಾ ಅಂದ್ರೆ ತುಂಬಾ ದುಃಖಕರ ಸಂಗತಿ. ಇನ್ನಾದರು ಅವರಿಗೆ ಸ್ಮಾರಕ ನಿರ್ಮಿಸಲು ಮತ್ತು ಅವರ ನೆನಪಿಗಾಗಿ ಏನಾದರು ಕಾರ್ಯಗಳು ನಡಿಲಿ ಎಂದು ಬೇಡುತ್ತಾ,ಕನ್ನಡ ಚಿತ್ತರಂಗದ ಚಿತ್ರಬ್ರಹ್ಮ , ಚಿತ್ರ ಶಿಲ್ಪಿ ,ಎಸ್.ಆರ್.ಪುಟ್ಟಣ್ಣ ಕಣಗಾಲ್ ಹುಟ್ಟು  ಹಬ್ಬದ ಶುಭಾಶಯಗಳುನ್ನು ಕೋರುತ್ತೇನೆ





ಪುಟ್ಟಣ್ಣವರು ೧ ಡಿಸಂಬರ್ ,೧೯೩೩ ರಂದು (01/12/1933 ) ಜನಿಸಿದರು.

ಅವರು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದವರಾಗಿದ್ದು,
"ಶುಬ್ರವೇಷ್ಠಿ ರಾಮಸ್ವಾಮಯ್ಯ ಸೀತಾರಾಮ ಶರ್ಮ" ಪುಟ್ಟಣ್ಣ ಮೊದಲ ಹೆಸರು, ಚಿತ್ರರಂಗಕ್ಕೆ ಬರುವ ಮುನ್ನ ಇವರು ಹಲವು ನೆಲೆಗಳಲ್ಲಿ ದುಡಿದು , ಕನ್ನಡ ಚಿತ್ರರಂಗದ ದಲ್ಲಿ ಜನರೇಟರ್ ಕ್ಲೀನರಾಗಿ, ಡ್ರೈವರಾಗಿ,  ಹೀಗೆ ಹಲವಾರು ಕೆಲಸಗಳನ್ನು ಮಾಡ್ತಾ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕರಲ್ಲೊಬ್ಬರಾದ ಬಿ.ಆರ್. ಪಂತುಲು ಅವರ ಬಳಿ 1954ರಲ್ಲಿ  ಸಹಾಯಕ ನಿರ್ದೇಶಕರಾಗಿ ಕೆಲಸಕ್ಕೆ ಸೇರಿದ ಪುಟ್ಟಣ್ಣ ಅವರು ಉತ್ತಮ ಕೆಲ್ಸಾ ಮಾಡ್ತಾ ,ಉನ್ನತ ಹೆಸರು ಸಂಪಾದಿಸಿ
ಸಹ - ನಿರ್ದೇಶಕರಾಗಿ ಭಡ್ತಿ ಪಡೆದರು. ಆನಂತರ ಬಿ.ಆರ್. ಪಂತುಲು ಅವರು ಕನ್ನಡದಲ್ಲಿ  ನಿರ್ದೇಶನದ ಮಾಡಿದ ಸ್ಕೂಲ್ ಮಾಸ್ಟರ್ ಚಿತ್ರವನ್ನು, ಮಲಯಾಳಂ ನಲ್ಲಿ ನಿರ್ದೇಶನ ಮಾಡುವ ಮೂಲಕ 1964 ರಲ್ಲಿ ಬೆಳ್ಲಳಿತೆರೆಗೆ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮಿದರು. ಮಲಯಾಳಮ್ ನ ಕಳಾಂಜಿ ಕುಟ್ಟಿಯಾ ತಾಂಕಂ,ತೆಲುಗಿನ ಚೆಟ್ಟಾತ್ತಿ , ಪಕ್ಕಲು ಬಳ್ಳಾಮ್  ಎಂಬ ಸಿನಿಮಾ ಗಳನ್ನು ನಿರ್ದೇಶನ ಮಾಡಿ ಹೆಸರು ಮಾಡಿದರು. ನಂತರ ಕನ್ನಡ ಚಲನಚಿತ್ರರಂಗದಲ್ಲಿ ಬೆಳ್ಳಿಮೋಡ ಎಂಬ ಸಿನಿಮಾ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ  1967 ರಲ್ಲಿ ಪಾದಾರ್ಪಣೆ ಮಾಡಿ ಕರ್ನಾಟಕ ರಾಜ್ಯ ಸರ್ಕಾರ ಕೊಡುವ ಉತ್ತಮ ಸಿನಿಮಾ ಎಂಬ ರಾಜ್ಯ ಪ್ರಶಸ್ತಿಯನ್ನು ಮೊದಲ ಸಿನಿಮಾದಲ್ಲೆ ಪಡೆದರು. ಅಲ್ಲಿಂದ ಅವರು  ಹಲವಾರು ಕಾದಂಬರಿ ಆಧಾರಿತ ಚಿತ್ರಗಳಿಗೆ ಹೆಚ್ಚು ಒತ್ತು  ಮತ್ತು ಮಹತ್ವಾ ಕೊಟ್ಟು,ಶರಪಂಜರ , ಗೆಜ್ಜೆಪೂಜೆ , "ಮಲ್ಲಮ್ಮನ ಪವಾಡ" "ಕರುಳಿನ ಕರೆ" "ಸಾಕ್ಷಾತ್ಕಾರ "{ಡಾ.ರಾಜ್ ಕುಮಾರ್} ಹೀಗೆ ಅವರು ಸಮಾಜಿಕ ಸಂದೇಶ ಉಳ್ಲ  ಅವರು ಚಿತ್ರಗಳನ್ನು ನಿರ್ದೇಶನ ಮಾಡಿ ಕನ್ನಡನಾಡಿನ ಜನರಲ್ಲಿ ಮತ್ತು ಕನ್ನಡ ಚಿತ್ರರಂಗದಲ್ಲಿ ಚಿರಸ್ಥಾಯಿಯಾಗಿ ಉಳಿದರು. ಇವರ ಸಿನಿಮಾ ಗಳು ಬಿಡುಗಡೆಗಾಗಿ ಕನ್ನಡ ಚಿತ್ರರಂಗ ಅಲ್ಲದೆ ಭಾರತೀಯ ಚಿತ್ರರಂಗ ಕಾಯುತ್ತಿತ್ತು ಅಷ್ಟರಮಟ್ಟಿಗೆ ಅವರ ಸಿನಿಮಾ ಗಳ ಕ್ರೇಜಿ ಚಿತ್ರರಂಗದಲ್ಲಿ ಮತ್ತು ಜನರಲ್ಲಿ ಹಾಸುಹೊಕ್ಕಿತ್ತು.
ಅಂತ ಮಾಹನ್  ನಿರ್ದೇಶಕ ,ಚಿತ್ರಬ್ರಹ್ಮ ಪುಟ್ಟಣ್ಣನವರು ನಂತರ ನಾಗರ ಹಾವು ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಮತ್ತು ರೆಬಲ್ ಸ್ಟಾರ್ ಅಂಬರೀಶ್ ಎಂಬ ಡರಡು ದೃವತಾರೆಗಳ್ನು  ಕನ್ನಡ ಚಿತ್ರರಂಗಕ್ಕೆ  ಪರಿಚಯಿಸಿದರು.ಹಾಗೂ ಕನ್ನಡ  ಚಲನಚಿತ್ರನಿರ್ದೇಶಕ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾಗಿ, ಜೊತೆಗೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಪುಟ್ಟಣ್ಣನವರ ಚಿತ್ರಗಳ ಮೂಲಕ ಬೆಳಕಿಗೆ ಬಂದ, ಪ್ರಸಿದ್ಧರಾದ ಚಿತ್ರಕಲಾವಿದರು ಅನೇಕರು. ಆ ಪೈಕಿ ನಾಯಕಿ ನಟಿಯರಲ್ಲಿ ಕಲ್ಪನಾ, ಆರತಿ, ಪದ್ಮಾ ವಾಸಂತಿ ಹಾಗೂ ಅಪರ್ಣಾ ಪ್ರಮುಖರು. ನಾಯಕ ನಟರಲ್ಲಿ ವಿಷ್ಣುವರ್ಧನ್, ರಾಮಕೃಷ್ಣ, ಜೈಜಗದೀಶ್, ಅಂಬರೀಶ್, ಶ್ರೀನಾಥ್, ಶ್ರೀಧರ್ , ಮೊದಲಾದವರು ಕನ್ನಡ ಜನಪ್ರಿಯ ನಟರಾಗಿ ಮಿಂಚಿದವರು ,



 
ಸಾವಿರ ಮೆಟ್ಟಿಲು ಹತ್ತಿದ ಪುಟ್ಟಣ್ಣ ಮಸಣದ ಹೂ ಕೊನೆಯ ಚಿತ್ರವಾಗಿ ಕಪ್ಪು ಬಿಳುಪಿನ ಬೆಳ್ಳಿಮೋಡ ಸೇರಿ ಶುಭಮಂಗಳ ಹಾಡಿ ಶ್ರೇಷ್ಠ ನಿರ್ದೇಶಕರಾಗಿ ಸಾಕ್ಷಾತ್ಕಾರಗೊಂಡ, ಕನ್ನಡ ಸಿನಿಮಾ ರಂಗದ ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರು  ಜೂನ್ ೫ ೧೯೮೫ ರಂದು ಪತ್ನಿ ನಾಗಲಕ್ಷ್ಮಿ ಮತ್ತೆ ಐವರು ಮಕ್ಕಳನ್ನು ಅಗಲಿ ಇಹಲೋಕ  ತೆಜಿಸಿದರು. ಅಂತಹ ಮಹಾನ್ ವ್ಯಕ್ತಿ, ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ ,ದೃವತಾರೆ ಪುಟ್ಟಣ್ಣ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳ್ನು ಕೋರುತ್ತಾ ಮತ್ತು ಮತ್ತೊಮ್ಮೆ ಅವರು ಕನ್ನಡನಾಡಲ್ಲಿ ಮತ್ತು ಕನ್ನಡ ಚಿತ್ರರಂಗದಲ್ಲಿ   ಮತ್ತೆ ಹುಟ್ಟಿ ಬರಲಿ ಎಂದು ಆಶಿಸುತ್ತೇನೆ .ಜೈ ಕರ್ನಾಟಕ, ಜೈ ಹಿಂದು.#donifilmmasters #arjundonifilmasters #PuttannaKanagal #DirectorPuttanna
ನೊಂದ ಸಿನಿಮಾ ಸ್ಕ್ರಿಪ್ಟ್ ರೈಟರ್ ಮತ್ತು ಸಹ- ನಿರ್ದೇಶಕ ಎಮ್. ಎ. ಅರ್ಜುನ ಡೋಣಿ.

Comments

Popular posts from this blog

"LIC ನಲ್ಲಿ ತಿಂಗಳಿಗೆ 60 ಸಾವಿರ ಕಟ್ಟಿ,2.24 ಕೋಟಿ ರೂಪಾಯಿ ಪಡೆಯಿರಿ"

Call me4 app| Best App TO YouTube Creators By ArjunDoni FilmMasters|You ...