"ಮದಗಜ " ಸಿನಿಮಾ ವಿಮರ್ಶೆ

 

"ಮದಗಜ " ಸಿನಿಮಾ ವಿಮರ್ಶೆ

ಸಿನಿಮಾದ ಜಾನರ್ :-  ಆಕ್ಷನ್ ಮತ್ತು ದ್ವೇಷ




ಸಿನಿಮಾ ಕಥೆಯ ಎಳೆ :-
ಎರಡು ಊರುಗಳ ಮಧ್ಯೆ ನೀರಿಗಾಗಿ ಜಗಳಾಗುತ್ತಿರುತ್ತದೆ. ಅದನ್ನು ಕಾಶಿಯಿಂದ ಕರ್ನಾಟಕಕ್ಕೆ ಬಂದ ನಾಯಕ ಆಕ್ಷನ್ ,ಮಾಸ್ ಸಂಭಾಷಣೆಯ ಮೂಲಕ ಬಗೆಹರಿಸುವದೇ ಕಥೆ .
ಮತ್ತೆ ಅದೇ ಹಳೆ ಕಥೆ .

೧)ಸ್ಕ್ರಿಪ್ಟ್ ಅನಾಲಿಸಿಸ್ :-

1) ಸಿನಿಮಾ ಒನ್‌ ಲೈನ್  ಕಥೆ :-

ಕಥೆ ಕಾಶಿಯಿಂದ  ಕರ್ನಾಟಕದ ಕಡೆ ಸಾಗುತ್ತದೆ. ಶಿವಗಢ ಮತ್ತು ಗಜೇಂದ್ರಗಢ  ಎಂಬ  ಎರಡು ಊರಿನ ನಡುವೆ ನದಿ ಹರಿಯುತ್ತಿರುತ್ತದೆ. ಆ ನದಿಯ ನೀರನ್ನು ಬಿಡದೆ ಶಿವಗಢದವರಿಗೆ ಗಜೇಂದ್ರಗಢದವರು ತೊಂದರೆ ಕೊಡುತ್ತಿರುತ್ತಾರೆ. ಆಗ ಶಿವಗಢದ ಭೈರವ  ಊರಿಗೆ ನೀರನ್ನು ಬಿಡಿಸಿಕೊಳ್ಳೋಕೆ ಎಲ್ಲಿಲ್ಲದ ಪ್ರಯತ್ನ ನಡಿಸಿತ್ತಿರುತ್ತಾನೆ. ಎಷ್ಟರ ಮಟ್ಟಿಗೆ ಎಂದರೆ, ಊರಿಗಾಗಿ ಹೋರಾಡುತ್ತಾ ಮಗ ಸೂರ್ಯನನ್ನು ತ್ಯಾಗ ಮಾಡಿರುತ್ತಾನೆ.  ನಾಯಕ  ಸೂರ್ಯ ವಾರಾಣಸಿಯಲ್ಲಿ ಯಾಕೆ ನೆಲೆಸಿರುತ್ತಾನೆ. ಆ  ಎರಡೂ ಊರಿನ ದ್ವೇಷ ಕಡಿಮೆಯಾಗಿ ,ನೀರಿನ ಜಗಳ ಬಗೆ ಹರಿಯುತ್ತಾ, ತಾಯಿ (ದೇವಯಾನಿ) ಯನ್ನು ಮತ್ತು ಊರನ್ನು ಉಳಿಸೋಕೆ ಸೂರ್ಯ  ಹೇಗೆ ಒದ್ದಾಡುತ್ತಾನೆ ಎಂಬುದನ್ನು ನೀವು ಸಿನಿಮಾದಲ್ಲಿಯೇ ನೋಡಬೇಕು.

2)ಕಥೆಯ ಸ್ಕ್ರೀನ್ ಪ್ಲೇ :-
ಯಾವುದೇ ಒಂದು ಸಿನಿಮಾ ಗೆಲ್ಲೊದಕ್ಕೆ ಸ್ಕ್ರೀನ್ ಪ್ಲೇ ಪ್ರಮುಖ ವಾಗಿರುತ್ತದೆ. ಚಿತ್ರ ಕಥೆ ಸಹ ಈ  ಸಿನಿಮಾ ನೋಡಿಸಿಕೊಂಡು ಹೋಗೊದಕ್ಕೆ ಮುಖ್ಯ ಕಾರಣವಾಗಿದೆ. ಹಲವು ಪಾತ್ರಗಳ ಮೂಲಕ ಸಿನಿಮಾ ಚತ್ರಕಥೆಯನ್ನು ಪೋಷಿಸಿ ,ಅದನ್ನು ನಿರ್ದೇಶಕರಾದ ಮಹೇಶ್ ಕುಮಾರ್ ಅವರು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅವರ ಹಿಂದಿನ ಸಿನಿಮಾ ಒಂದು ಹಳ್ಳಿ ಹುಡುಗನ ಕಥೆಯಾಗಿ ಮಾಡಿ ಕ್ಲಾಸ್  ಪ್ರೇಕ್ಷಕರ ಮನ ಗೆದ್ದಿದ್ದ ಇವರು . ಈ ಸಿನಿಮಾದಿಂದ ಮಾಸ್ ಪ್ರೇಕ್ಷಕರ ಮನಸ್ಸನ್ನು ಕದ್ದಿದ್ದಾರೆ.

3) ಎಮೋಷನ್ಸ್ ( ಭಾವನೆಗಳು) :- ಚಿತ್ರಕಥೆಯಲ್ಲಿ ಮತ್ತು ಚಿತ್ರ ದಲ್ಲಿವ ದ್ವೇಷ ಮತ್ತು ತಾಯಿಯ ಸೆಂಟಿಮೆಂಟ್ ನ್ನು  ಅಲ್ಲಲ್ಲಿ ಕಾಮಿಡಿಯ ಸ್ಪರ್ಶಾ ನೀಡಿ  , ಆಕ್ಷನ್ ಗಳನ್ಮು ದೃಶ್ಯಗಳನ್ನು ಸೃಷ್ಟಿಸಿ ಹದವಾಗಿ ಬೆರೆಸಿ  ಪ್ರೇಕ್ಷಕರನ್ನು ಹಿಡಿದಿಕೂರುಸುವುದರಲ್ಲಿ  ನಿರ್ದೇಶಕರು ೭೦% ಯಶಸ್ವಿಯಾಗಿ ದ್ದಾರೆ.

4) ಸಂಭಾಷಣೆ :-
ಸಿನಿಮಾದ ೭೦% ಪ್ರ ತಿಯೊಂದು ಡೈಲಾಗ್ ಮಾಸ್ ಅಭಿಮಾನಿಗಳಿಗೆ ಕಚಗುಳಿ ಇಡುತ್ತವೆ,‘ನೀರು ಮತ್ತು ರಕ್ತವನ್ನು ಒಂದಾಗೋಕೆ ಬಿಡುತ್ತೇವೆ. ಆದರೆ ನೀರು ಹರಿಯೋಕೆ ಬಿಡಲ್ಲ’ ಎನ್ನುವಂತಹ ಮಾಸ್ ಡೈಲಾಗ್​ಗಳು ಸಿನಿಮಾದ ಕಥೆಯನ್ನು ನೋಡಿಸ್ಕೊಂಡು ಹೋಗುತ್ತೆ. ಇಂತಹ ಎಷ್ಟೋ ಸಂಭಾಷಣೆ ಬರೆದಿರುವ ಮಂಜು ಮಾಸ್ತಿ ಅವರನ್ನ ಮೆಚ್ಚಬೇಕು.



5) ಎಂಟರ್ಟೈನ್ಮೆಂಟ್ ( ಮನರಂಜನೆ) :-
ಇದು ಪಕ್ಕಾ ಮಾಸ್ ಸಿನಿಮಾ. ಮಾಸ್ ಸಿನಿಮಾಗೆ ಬೇಕಾದಂತ ಫೈಟ್, ಲವ್, ಸಾಂಗ್‌, ಎಮೋಷನ್ಸ್ , ಕಚಗುಳಿ ಸಂಭಾಷಣೆ ಎಲ್ಲಾ ಒಳಗೊಂಡ ಮಾಸ್ ಸಿನಿಮಾ ವಾಗಿದೆ.

ಅದರೆ ಈ ಸಿನಿಮಾದ ಸ್ಕ್ರಿಪ್ಟ್ ನಲ್ಲಿ ಹೊಸತನ ಅಂತ ಯಾವದು ಇಲ್ಲಾ ,ಅನ್ ಬಿಲೀವಿಬಲ್ ದೃಶ್ಯಗಳಾಗಿಲಿ, ಮನಮುಟ್ಟುವ ಅಂಶಗಳಾಗಲಿ, ಲಾಜಿಕ್ ಆಗಲಿ ಇಲ್ಲಾ ಹಾಗಾಗಿ ನೈಜತಗೆ ಸ್ವಲ್ಪ ದೂರಾ ಅನಿಸುತ್ತೆ .ಯಾಕಂದ್ರೆ ಕನ್ನಡ ಪ್ರೇಕ್ಷಕರು ಹಾಚ್ಚಾಗಿ ನೈಜತೆ ಮತ್ತು ಲಾಜಿಕನ್ನು ಹುಡುಕುತ್ತಾರೆ.


೨) ಇನ್ನೂ ಟೆಕ್ನಿಕಲ್ ಅನಾಲಿಸಿಸ್ ನೋಡೋದಾದ್ರೆ

1)ಡೈರೆಕ್ಷನ್ ( ನಿರ್ದೇಶನ) :-

ಒಂದು ಅದ್ದೂರಿ ಪರಿಭಾಷೆಯ ಸಿನಿಮಾ ವನ್ನು  ಯಾವ ರೀತಿಯಾಗಿ ದೃಶ್ಯ ಗಳನ್ನು ಕಟ್ಟಿಕೊಡ್ತಾರೋ ಅದಕ್ಕಿಂತ ಚಂದವಾಗಿ ದೃಶ್ಯ ಗಳನ್ನು ಜೋಡಿಸಿ ಸಿನಿಮಾ ಮಾಡಿದ್ದಾರೆ ಎನ್ನುವುದು ಸಿನಿಮಾ ನೋಡುತ್ತಿದ್ರೆ ಗೊತ್ತಾಗುತ್ತೆ. ಆ ರೇಂಜಿಗೆ ನಮ್ಮ ಕನ್ನಡ ಭಾಷೆಯ ಸಿನಿಮಾ ಯಾವುದರಲ್ಲು ಕಮ್ಮಿ ಇಲ್ಲಾ ಎನ್ನುವಂತೆ ಸಿನಿಮಾನಾ ನಿರ್ದೇಶನ ಮಾಡಿದ್ದಾರೆ.ಆದ್ರೆ ಸಿನಿಮಾ ನೋಡುವಾಗ ಮುಂದೆ ಏನಾಗುತ್ತೆ ಅನ್ನೊದನ್ನು ಪ್ರೇಕ್ಷಕ ಸುಲಭವಾಗಿ ಗುರುತಿಸಬಹುದು.

2) ನೆರೇಶನ್ ( ಸಿನಿಮಾ ಕಥೆ ಹೇಳುವ ರೀತಿ) :- ಒಂದು ಸಿನಿಮಾ ಪ್ರೇಕ್ಷಕರಿಗೆ ಬೋರಾಗದಂತೆ ಕಟ್ಠಿಕೊಡಲು ತುಂಬಾ ಕಷ್ಟ. ಆದರೂ ಈ ಸಿನಿಮಾದಲ್ಲಿ ನಿರ್ದೇಶಕರು ದ್ವೇಷ , ಸಾಂಗ್, ಎಮೋಷನ್,ಕಾಮಿಡಿ ಒಟ್ಟಿನಲ್ಲಿ ಒಂದು ಕಮರ್ಷಿಯಲ್ ಸಿನಿಮಾಗೆ  ಏನು ಇರಬೇಕು ಅವೆಲ್ಲವನ್ನೂ ಸೇರಿಸುವ ಮೂಲಕ ಅದರಲ್ಲಿ ಯಶಸ್ವಿಯಾಗಿದ್ದಾರೆ ಅನ್ನಬಹುದು.

3)ಛಾಯಗ್ರಹಣ (ಸಿನಿಮಾ ಆಟೋಗ್ರಫಿ ) ಸಿನಿಮಾ ಅದ್ದೂರಿಯಾಗಿ, ಕಲರ್ಪುಲ್ಲಾಗಿ ಮೂಡಿಬರು ಮೇಜರಾಗಿ ಕಾರಣ. ಆ ಕೆಲಸವನ್ನು ಐ. ನವೀನ್ ಕುಮಾರ್ ಅವರು ಅಚ್ಚುಕಟ್ಟಾಗಿ ಕಣ್ಣಿಗೆ ಮುದವಾಗಿ ದೃಶ್ಯ ಕಾವ್ಯ ವಾಗಿ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದ್ದಾರೆ ಅಂದ್ರು ತಪ್ಪಾಗಲಾರದು ಅಷ್ಟು ಸುಂದರವಾಗಿ ಸಿನಿಮಾ ಮೂಡಿಬಂದಿದೆ. ಸಿನಿಮಾದಲ್ಲಿ ನ ಲೈಟಿಂಗ್ , ಕಲರ್ ಟೋನು ಎಲ್ಲಾವು ಸೂಪಾರಾಗಿವೆ ಕ್ಯಾಮರ ವರ್ಕಿಂಗ್ ಗೆ 95% ಕೊಡಬಹುದು.


4)ಕಲಾವಿದರ ಅಭಿನಯ (ಆರ್ಟಿಸ್ಟ್ ಫರ್ಫಮೆನ್ಸ್ ) :-
ರೋರಿಂಗ್ ಸ್ಟಾರ್ ಶ್ರೀ ಮುರುಳಿ ಹೆಸರಿ ತಕ್ಕಹಾಗೆ ರೋರಿಂಗಾಗಿ ನಟಿಸಿದ್ದಾರೆ.     ಸೆಕೆಂಡ್ ಆಫ್ ನಲ್ಲಿ ಬರುವ ಅತೀಮುಖ್ಯ ವಿಲನ್ ಪಾತ್ರ ದಾರಿ ಜಗಪತಿ ಬಾಬು ಅದ್ಬುತ ವಾಗಿ ನಟಿಸಿ ಇಡೀ ಸಿಮಾವನ್ನು ಆವರಿಕೊಳ್ತಾರೆ.ತಾಯಿ ಪಾತ್ರ ವಾದ ದೇವಯಾನಿ ಅವರು ಸಹ ತಮ್ಮ ಅಮೋಘ ಅಭಿನಯದ ಮೂಲಕ ಸಿನಿಮಾ ಕ್ಕೆ ಜೀವ ತುಂಬುತ್ತಾರೆ. ಹಾಗೇ ಕಲಾವಿದರಾದ
ಆಶಿಕ ರಂಗನಾಥ್ , ರಂಗಯಣ ರಘು , ಚಿಕ್ಕಣ್ಣ, ಶಿವ ರಾಜ್ ಕೆ. ಆರ್ ಪೇಟೆ ,ಧರ್ಮಣ್ಣ ,ಎಲ್ಲರೂ ಕಥೆಗೆ ಪೂರಕವಾಗಿ ನಟಿಸಿದ್ದಾರೆ.

5)ಸಂಗೀತ & ಬ್ಯಾಕ್ ಗ್ರೌಂಡ್ ಸಂಗೀತ :-
ರವಿ ಬಸ್ರೂರು ಅವರು ಈ ಸಿನಿಮಾಗೆ  ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಡುಗಳಷ್ಟೇ ಅಲ್ಲದೇ ಹಿನ್ನಲೆ ಸಂಗೀತದಲ್ಲೂ ರವಿ ಬಸ್ರೂರು ಕೈ ಚಳಕ ತೋರಿಸಿ ಸಿನಿಮಾ ಇನ್ನಷ್ಟು ಮುಂದೆ ನೋಡಿಸಿಕೊಂಡು ಹೋಗುವಂತೆ ಸಂಗೀತವನ್ನು ನೀಡಿದ್ದಾರೆ. ಹೀರೋ  ಶ್ರೀ ಮುರುಳಿ  ಮತ್ತು ವಿಲನ್​  ಜಗೊತಿಬಾಬು ಎಂಟ್ರಿ ದೃಶ್ಯ, ತಾಯಿ ಸೆಂಟಿಮೆಂಟ್​ ದೃಶ್ಯಗಳಲ್ಲಿ ರವಿ ಬಸ್ರೂರು ಅವರ     ಬ್ಯಾಕ್ ಗ್ರೌಂಡ್ ಸಂಗೀತ  ಕೆ. ಜಿ .ಎಫ್ ಕ್ಕೆ ನೀಡಿದ ಸಂಗೀತ ಥರ ಛಾಯೆ ಕಾಣಿಸಿದ್ರು ಸಿನಿಮಾ ನೋಡುವಾಗ ಅನಸಲ್ಲಾ. ತೆರೆ ಮುಂದೆ ರವಿ ಬಸ್ರೂರು ಕಾಣಿಸಿಕೊಳ್ಳದಿದ್ದರೂ, ತೆರೆ ಹಿಂದೆ ಅವರ ಸಂಗೀತ ಜೋರು ಸೌಂಡ್​ ಮಾಡಿದೆ.

6) ಸಿನಿಮಾ ಮೇಕಿಂಗ್ ( ಸಿನಿಮಾ ನಿರ್ಮಾಣ) :-
’ಈ ಸಿನಿಮಾದಲ್ಲಿ ಸಾಕಷ್ಟು ಅದ್ದೂರಿತನ ಇದೆ. ಪ್ರತಿಯೊಂದು ದೃಶ್ಯಗಳಲ್ಲೂ ಮತ್ತು ಫ್ರೇಮ್ ನಲ್ಲು  ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಅವರು ದೊಡ್ಡ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ ಅನ್ನೊದು ಎದ್ದು ಕಾಣುತ್ತೆ. ಇದರಿಂದ ಇಡೀ ಸಿನಿಮಾದಲ್ಲಿ ಬರುವ ಪ್ರತಿ ದೃಶ್ಯಗಳು ವಿಜೃಂಭಣೆಯಿಂದ ಕೂಡಿವೆ . ಇನ್ನೂ ಚಿತ್ರದಲ್ಲಿ ಫೈಟ್​ ದೃಶ್ಯಗಳನ್ನು ಅದ್ಭುತವಾಗಿ , ರಿಚ್ಚಾಗಿ ಶೂಟ್​ ಮಾಡಲಾಗಿದೆ.ಇದೊಂದು ಪಕ್ಕಾ ಮಾಸ್​, ಎಂಟರ್​​ಟೇನ್​ಮೆಂಟ್​ ಸಿನಿಮಾ ಆಗಿದೆ.

೩)ಆಡಿಯನ್ಸ್ ಅನಾಲಿಸಿಸ್( ಪ್ರೇಕ್ಷಕರ ಪ್ರಕಾರ )  :-
ಸಿನಿಮಾದ ಫಸ್ಟ್ ಆಫ್ ಆಕ್ಷನ್ ಸೆಂಟಿಮೆಂಟ್  ವರ್ಕೌಟ್​ ಆಗಿದೆ.  ಸೆಕೆಂಡ್ ಹಾಫ್​ನಲ್ಲಿ ವಿಲನ ಗಳ ಅಬ್ಬರದ ನಡುವೆ ಕೊಂಚ ಲವ್​ ಟಚ್​​ ಸಖತ್​ ಕಿಕ್​ ನೀಡುತ್ತೆ. ಪ್ರತಿಯೊಂದು ದೃಶ್ಯವು ಕಣ್ಣಿಗೆ ಹಬ್ಬ ಪಕ್ಕ ಮಾಸ್ ಎಂಟರ್ಟೈನ್ಮೆಂಟ್ ಒಂದು ಸಲ ನೋಡಲು ಅಡ್ಡಿಇಲ್ಲಾ . 




ಅಂದಹಾಗೆ ಸಿನಿಮಾ ಮೂರು ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ. ರಾಜ್ಯದ 800 ಚಿತ್ರಮಂದಿಗಳಲ್ಲಿ ಭರ್ಜರಿ ಯಾಗಿ ಓಡುತ್ತಿದೆ. ಮಾದಲ ದಿನದ ಕಲೆಕ್ಷನ್ 7.86 ಲಕ್ಷ ಚಾಚಿಕೊಂಡಿದೆ.

ಸಿನಿಮಾ ಸ್ಟಾರ್ ರೇಟ್
3.5 /5

ಇದೆಥರ  ಯಾವುದೇ ಸಿನಿಮಾ ವಿಮರ್ಶೆ ಮತ್ತು ಸುದ್ದಿಗಾಗಿ maarjundoni Film Script writer and Analyst
https://maarjundoni.blogspot.com/?m=1
ಬ್ಲಾಗ್ ಅನ್ನು ಲೈಕ್, ಸಬ್ಸ್ ಕ್ರೈಬ್ ಮಾಡುವ ಮಾಲಕ ಸಂಪರ್ಕಿಸಿ ಮತ್ತು ಬೆಂಬಲಿಸಿ.
M.A. Arjundoni ( Film Script writer And Analyst )
ನಿಮ್ಮ ಎಮ್. ಎ. ಅರ್ಜುನ ಡೋಣಿ ( ಸಿನಿಮಾ ಬರಹಗಾರ ಮತ್ತು ಸ್ಕ್ರಿಪ್ಟ್ ಅನಾಲಿಸ್ಟ್ )




Comments

Popular posts from this blog

"LIC ನಲ್ಲಿ ತಿಂಗಳಿಗೆ 60 ಸಾವಿರ ಕಟ್ಟಿ,2.24 ಕೋಟಿ ರೂಪಾಯಿ ಪಡೆಯಿರಿ"

Call me4 app| Best App TO YouTube Creators By ArjunDoni FilmMasters|You ...