"ಹೊಸ ದಾಖಲೆ ಬರೆದ , ಮೋಹನ್ ಲಾಲ್ ಅವರ "ಮರಕ್ಕಾರ್ " ಚಿತ್ರ.


"ಹೊಸ ದಾಖಲೆ ಬರೆದ , ಮೋಹನ್ ಲಾಲ್ ಅವರ "ಮರಕ್ಕಾರ್ " ಚಿತ್ರ.


ಮೋಹನ್​ಲಾಲ್  ,ಕೀರ್ತಿ ಸುರೇಶ್ , ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮತ್ತು  ಸುನೀಲ್ ಶೆಟ್ಟಿ, ಅರ್ಜುನ್ ಸರ್ಜಾ , ಪ್ರಭು, ಅಶೋಕ್ ಸೆಲ್ವನ್  ಸುಹಾಸಿನಿ ಮಣಿ ರತ್ನಂ   , ಸಿದ್ದಿಕ್, ಫಾಜಕ್, ಪ್ರನವ್ ಮೋಹನ್ ಲಾಲ್,    ಕಲ್ಯಾಣ್ ಪ್ರಿಯದರ್ಶಿನ್  ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ   ‘ಮರಕ್ಕಾರ್: ಲಯನ್ ಆಫ್​ ದಿ ಅರೇಬಿಯನ್ ಸೀ’ ಚಿತ್ರ  ಡಿಸೆಂಬರ್ ೨ ರಂದು  (ಡಿ.02) ಬಿಡುಗಡೆಯಾಗಿ  ಆದ್ದೂರಿ ಯಶಸನ್ನು ಕಾಣುತ್ತಿದೆ. ಚಿತ್ರದ ಅದ್ದೂರಿತನಕ್ಕೆ , ಚಿತ್ರದ ತಾರಗಣಕ್ಕೆ ಹಾಗೂ ದೃಶ್ಯ ವೈಭವಕ್ಕೆ ಜನರು ಫುಲ್ ಫಿದಾಗಿ 5 ಸ್ಟಾರ್  ರೇಟಿಂಗ್ ಗೆ 4.5 ಸ್ಟಾರ್ ಕೊಟ್ಟಿದ್ದಾರೆ. ಆ ಮಟ್ಟಿಗೆ ಸಿನಿಮಾ ವನ್ನು ಮೆಚ್ಚಿದ್ದಾರೆ ಪ್ರೇಕ್ಷಕ ಮಹಾ ಪ್ರಭುಗಳು. 




 ಜೊತೆಗೆ ಚಿತ್ರದಲ್ಲಿನ ಮೋಹನ್ ಲಾಲ್ ಕೀರ್ತಿ ಸುರೇಶ್ , ಸುನೀಲ್ ಶಟ್ಟಿ ಅರ್ಜುನ ಸರ್ಜಾ ಹೀಗೆ ಎಲ್ಲಾ ಕಲಾವಿದರ ನಟನೆ ಮನಸೋತು ಶುಕ್ರವಾರ ದಿಂದ ಭಾನುವಾರದ ಎಲ್ಲಾ ಟಿಕೆಟ್ ಗಳು ಸೋಲ್ಡ್ ಔಟ್  ಸಿನಿಮಾ ಆಗಿವೆ. ಅಷ್ಟರಮಟ್ಟಿಗೆ  ಸಿಮಾ ನೋಡಲು ಜನ ಮುಗಿಬಿದ್ದಿದ್ದಾರೆ. ಜೊತೆಗೆ  ನಿರ್ದೇಶಕ  ಪ್ರಿಯದರ್ಶನ್ ಅವರ   ಸಿನಿಮಾ  ಕಟ್ಟಿಕೊಟ್ಟ ಬಗೆಯನ್ನು , ಅವರ ನಿರೂಪಣಾ ಶೈಲಿಯನ್ನು ಜನ ಇಷ್ಟಪಟ್ಟಿದ್ದಾರೆ.


ಇಂತ ಅಧ್ಬುತ ‘ಮರಕ್ಕಾರ್’ ಚಿತ್ರ ವು  ಬಿಡುಗಡೆಗು ಮುನ್ನವೇ ಅಂದರೆ ಶುಕ್ರವಾರ ಬಿಡುಗಡೆ ಆಗುವ  ಭಾರತೀಯ ಚಿತ್ರರಂಗದಲ್ಲಿ ದಾಖಲೆಯನ್ನು ಬರೆದಿದೆ . ಇದು ಸತ್ಯ ಮೋಹನ್​ಲಾಲ್  ತನ್ಮ ಅಧಿಕೃತ ಟ್ವೀಟ್  ಖಾತೆಯ ಮೂಲಕ ತಮ್ಮ ಚಿತ್ರ ಸೃಷ್ಟಿಸಿದ ಅಭೂತಪೂರ್ವ ದಾಖಲೆಯ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕೇವಲ ಆನ್ ಲಯನ್  ಪ್ರಿ-ಬುಕ್ಕಿಂಗ್ ಮೂಲಕವೇ  ಚಿತ್ರ ₹ 100 ಕೋಟೆಯನ್ನು ಬಾಚಿಕೊಂಡು ಹೊಸ ಅಲೆಯನ್ನು ಎಬ್ಬಿಸಿದೆ.  ಅಲ್ಲದೇ ಈ ದಾಖಲೆ ರಚಿಸಿದ ಭಾರತದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಕೂಡ ‘ಮರಕ್ಕಾರ್’ ಚಿತ್ರ ಪಾತ್ರವಾಗಿದೆ. ಈ  ಚಿತ್ರವು ವಿಶ್ವಾದ್ಯಂತ 4,100 ಸ್ಕ್ರೀನ್​ಗಳಲ್ಲಿ ತೆರೆಗೆ ಬರಲಿದ್ದು, ದಿನವೊಂದಕ್ಕೆ 16,000 ಪ್ರದರ್ಶನ ಕಾಣಲಿದೆ. ಈ ಮೂಲಕ ಚಿತ್ರವು ಬಿಡುಗಡೆಗೂ ಮುನ್ನ ಬುಕ್ಕಿಂಗ್​ನಿಂದಲೇ ₹ 100 ಕೋಟಿ ಕ್ಲಬ್ ಸೇರಿದೆ ಎಂದು  ಮೋಹನ್ ಲಾ್ ಅವರು ತಮ್ಮ ಟ್ವಿಟರ್ ನಲ್ಲಿ ಪೋಸ್ಟರ್ ಅಂಕಿ ಅಂಶ ಹಾಕುವ ಮೂಲಕ ದೃಡಪಡಿಸಿದ್ದಾರೆ.


ಇನ್ನೂ ಚಿತ್ರವು   16ನೇ ಶತಮಾನದಲ್ಲಿ ಪೋರ್ಚುಗೀಸರ ವಿರುದ್ಧ ನೌಕಾಪಡೆಯನ್ನು ಕಟ್ಟಿ ಹೋರಾಡಿದ ‘ಕುಂಜಲಿ ಮರಕ್ಕಾರ್ IV’ ಕಥಾ ಅಂದರವನ್ನು  ಒಳಗೊಂಡ ಐತಿಹಾಸಿಕ ಚಿತ್ರವಾಗಿದೆ. ಹಾಗೆ ನಿರ್ದೇಶಕ ಪ್ರಿಯದರ್ಶನ್ ನಿರ್ದೇಶಿಸಿರುವ ಈ ಚಿತ್ರ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಈ ವರ್ಷ ಒಟಿಟಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿತ್ತು. ಕೊನೆಗೆ ಸರ್ಕಾರ ಹಾಗೂ ಚಿತ್ರರಂಗದ ಗಣ್ಯರ ಮಧ್ಯಸ್ಥಿಕೆಯಿಂದ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಯಿತು.  ಇದರಿಂದ ಚಿತ್ರಫಲ ನೀಡಿದ್ದು,  ಬಾಕ್ಸ್ ಆಫೀಸ್  ಗಲ್ಲಾಪೆಟ್ಟಿಗೆಯಲ್ಲಿ ಮುನ್ನುಗ್ಗು ಹಳೆ ದಾಖಲೆಗಳನ್ನು ಮುರಿಯಲು ಸಜ್ಜಾಗಿದೆ.

ಮೋಹನ್​ಲಾಲ್ ಹಂಚಿಕೊಂಡಿರುವ ಟ್ವೀಟ್:

ಅಂದಾಹಾಗೆ ಈ ‘ಮರಕ್ಕಾರ್’ ಚಿತ್ರವು ಮಲಯಾಳಂ ,  ಮಲಯಾಳಂ, ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲೀಷ್​ ಭಾಷೆಯಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಮಲಯಾಳಂ  ಚಿತ್ರರಂಗದ ಇತಿಹಾಸದಲ್ಲೇ ಅದ್ದೂರಿ ಬಜೆಟ್​ ಚಿತ್ರವಾಗಿದ್ದು , ಚಿತ್ರಕ್ಕೆ ಸುಮಾರು ₹ 100 ಕೋಟಿಗೂ ಅಧಿಕ ಮೊತ್ತವನ್ನು ಖರ್ಚುಮಾಡಲಾಗಿದೆ. ಅಧಿಕೃತ ಚಿತ್ರತಂಡದ ಮೂಲಗಳು ದೃಡಪಡಿಸುವೆ.

ಇದೆಥರ  ಯಾವುದೇ ಸಿನಿಮಾ ಸುದ್ದಿಗಾಗಿ  MAArjunddoni.Blogspot.com ಬ್ಲಾಗ್ ಅನ್ನು ಲೈಕ್, ಸಬ್ಸ್ ಕ್ರೈಬ್ ಮಾಡುವ ಮಾಲಕ ಸಂಪರ್ಕಿಸಿ ಮತ್ತು ಬೆಂಬಲಿಸಿ.
M.A. Arjundoni ( Film Script writer And Analyst )
ನಿಮ್ಮ ಎಮ್. ಎ. ಅರ್ಜುನ ಡೋಣಿ ( ಸಿನಿಮಾ ಬರಹಗಾರ ಮತ್ತು ಸ್ಕ್ರಿಪ್ಟ್ ಅನಾಲಿಸ್ಟ್ )

Comments

Popular posts from this blog

"LIC ನಲ್ಲಿ ತಿಂಗಳಿಗೆ 60 ಸಾವಿರ ಕಟ್ಟಿ,2.24 ಕೋಟಿ ರೂಪಾಯಿ ಪಡೆಯಿರಿ"

Call me4 app| Best App TO YouTube Creators By ArjunDoni FilmMasters|You ...