" ಭಾರತದ ಬಹು ನಿರೀಕ್ಷಿತ 10 ಚಿತ್ರಗಳಲ್ಲಿ ನಮ್ಮ ಕನ್ನಡ ಸಿನಿಮಾ "ಅವು ಯಾವು ಗೊತ್ತಾ?
" ಭಾರತದ ಬಹು ನಿರೀಕ್ಷಿತ 10 ಚಿತ್ರಗಳಲ್ಲಿ ನಮ್ಮ ಕನ್ನಡ ಸಿನಿಮಾ "ಅವು ಯಾವು ಗೊತ್ತಾ?
ಡಿಸೆಂಬರ್ಭಾ ೧೭/೨೧ :- ಭಾರತದಲ್ಲಿ ಪ್ರೇಕ್ಷಕ ಮಹಾಪ್ರಭುಗಳು ಕಾಯುತ್ತಿರುವ ೧೦ ಸಿನಿಮಾ ಗಳು ಮುಂದಿನ ವರ್ಷ ೨೦೨೨ ರಲ್ಲಿ ಭಾರತದ ಬೆಳ್ಳಿ ಪರದೆಗೆ ಅಪ್ಪಳಿಸಲು ಒಂದರಹಿಂದೆಯಂತೆ ಸಾಲು - ಸಾಲು ಚಿತ್ರ ಗಳು ಕಾಯುತ್ತಿವೆ. ಕೋರೋನಾ ಕಾರಣದಿಂದ ಕಳೆದ ೨ ವರ್ಷಗಳಿಂದ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ಹೆದರುತ್ತಿದ್ದರು .ಈಗ ಭಾರತದಲ್ಲಿ ಕೋರೋನಾ ಗಣನೀಯವಾಗಿ ಇಳಿಮುಖವಾಗಿ ,ಥಿಯೇಟರ್ ಗಳು ೧೦೦% ಒಪನ್ ಆದ್ದರಿಂದ ಎಲ್ಲಾ ದೊಡ್ಡ-ದೊಡ್ಡ ನಿರ್ಮಾಪಕರು, ನಾಯಕ ನಟರು ತಮ್ಮ ಚಿತ್ರ ತೆರಗೆ ತೆರಲು ರೆಡಿಯಾಗಿ ಮುಂಚನೇ ಬಿಡುಗಡೆ ದಿನಾಂಕ ವನ್ನು ಘೋಷಿಸಿದ್ದಾರೆ. ಅಂತ ಬಹು ನಿರೀಕ್ಷಿತ ಭಾರತದ ೧೦ ಸಿನಿಮಾಗಳಲ್ಲಿ ಮೊದಲನೇ ಸ್ಥಾನ ದಲ್ಲಿ ನಮ್ಮ ಕನ್ನಡ ಸಿನಿಮಾ ಇದೆ ಅನ್ನೋದೆ ಹೆಮ್ಮೆಯ ವಿಷಯ. ಆ ಸಿನಿಮಾ ಬೇರೆ ಯಾವುದಲ್ಲಾ ಅದೇ...
೧)"ಕೆ.ಜಿ.ಎಫ್ " ಭಾರತದ ಚಿತ್ರರಂಗದ ಇತಿಹಾಸದಲ್ಲೇ ಅತೀ ಯಶಸ್ಸು ಗಳಿಸಿದ ಚಿತ್ರ ಗಳಲ್ಲಿ ಮತ್ತು ಪ್ರೇಕ್ಷಕರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಕೆ.ಜಿ.ಎಫ್. ಮೊದಲನೇ ಸ್ಥಾನ ಪಡೆದಿದೆ. ೨೦೧೮ ರಲ್ಲಿ ಬಿಡುಗಡೆಯಾಗಿ ರಾಕಿಂಗ್ ಸ್ಟಾರ್ ಯಶ್ ಅವರನ್ನು ಇಂಡಿಯನ್ ಸೂಪರ್ ಸ್ಟಾರ್ ಮಾಡಿದ ಚಿತ್ರ ಕೆ.ಜಿಎಫ್. ಈಗ
ಕೆ.ಜಿ.ಎಫ್. ಚಾಪ್ಟರ್-೨ ಆಕ್ಷನ್ ಮತ್ತು ಗ್ಯಾಂಗ್ ಸ್ಟಾರ್ ಸಿನಿಮಾ ಆಗಿದ್ದು ಬಿಡುಗಡೆಗೆ ಸಜ್ಜಾಗುತ್ತಿದೆ. ಇಂಡಿಯನ್ ಸೂಪರ್ ಸ್ಟಾರ್ ಯಶ್ , ಸಂಜಯ್ ದತ್ತ್ , ರವೀನಾ ಟಂಡನ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಾಗೂ ಪ್ರಾಶಾಂತ್ ನೀಲ್ ಅವರು ನಿರ್ದೇಶನ ಮಾಡಿದ ಈ ಚಿತ್ರ ಏಪ್ರಿಲ್ ೧೪, ೨೦೨೨ ಕ್ಕೆ ಪ್ರಪಂಚದಾದ್ಯಂತ ಕನ್ನಡ ,ತೆಲುಗು ತಮಿಳು , ಮಳಯಾಳಂ, ಹಿಂದಿ, ಸೇರಿದಂತೆ ೫ ಭಾಷೆಯಲ್ಲಿ ಬಿಡುಗಡೆಯಾಗಲಿದೆ.
೨) ಆರ್.ಆರ್. ಆರ್. ಸಿನಿಮಾ ಕೂಡ ಬಿಡುಗಡೆ ಯ ದಿನಾಂಕ ಘೋಷಿಸಿದ್ದು ಇಡೀ ತಂಡ ಚಿತ್ರದ ಪ್ರಮೋಷನ್ ಯನ್ನು ಅದ್ದೂರಿಯಾಗಿ ಮಾಡುತ್ತಿದೆ. ಭಾರತದ ಎವರಿಗ್ರೀನ್ ನಿರ್ದೇಶಕರಲ್ಲಿ ಒಬ್ಬರಾದ, ಮೋಸ್ಟ್ ಸಕ್ಸಸ್ ಪುಲ್ ನಿರ್ದೇಶಕ ರಾದ , ಬಾಹುಬಲಿ ಅಂತ ಅದ್ದೂರಿ ಯಶಸ್ಸಿನ ನಿರ್ದೇಶಕ ಎಸ್.ಎಸ್. ರಾಜಮೌಳಿ ಈ ಚಿತ್ರನ ನಿರ್ದೇಶಿಸಿದ್ದಾರೆ. ಹಾಗೂ ದಕ್ಷಿಣ ಭಾರತದ ಸೂಪರ್ ಹೀರೋಗಳಾದ ಜೂನಿಯರ್ ಎನ್.ಟಿ ಆರ್ , ರಾಮ್ ಚರಣ್ ತೇಜ್, ಆಲಿಯಾ ಭಟ್, ಅಜಯ್ ದೇವ ಗನ್ ಹೀಗೆ ಹಲವಾರು ಕಲಾವಿದರು ನಟಿಸಿದ್ದಾರೆ. ಅಂದಹಾಗೆ ಈ ಸಿನಿಮಾ ಕನ್ನಡ ,ತೆಲುಗು ತಮಿಳು , ಮಳಯಾಳಂ, ಹಿಂದಿ, ಇಂಗ್ಲೀಷ್ ಸೇರಿದಂತೆ ಸುಮಾರು ೬ ಭಾಷೆಯಲ್ಲಿ ಜನವರಿ 7 2022 ವಿಶ್ವ ದಾದ್ಯಂತ ಬಿಡುಗಡೆಯಾಗಲಿದೆ. ರಾಜಮೌಳಿ ಸಿನಿಮಾಗಿಂತ ನಮ್ಮ ಕೆ.ಜಿ.ಎಫ್ -೨ ಮೋಸ್ಟ್ ವೇಟಿಂಗ್ ಸಿನಿಮಾನ ಅಂತ, ನಿಮಗೆ ಅನಸಬಹುದು , ಹೌದು ರಾಜಮೌಳಿ ಅವರು ಬಿಗ್ ಸಕ್ಸಸ್ ಪುಲ್ ನಿರ್ದೇಶಕರಾದ್ರು, ಇಬ್ಬರು ಸೂಪರ್ ಸ್ಟಾರ್ ನಟರು ನಟಿಸಿದ್ರು ಕೆ.ಜಿ.ಎಫ್ . -೨ ಸಿನಿಮಾ ಹುಡ್ಟಿಹಾಕಿದಷ್ಟು ಕುತುಹಲಾವನ್ನು ರಾಜಮೌಳಿ ಸಿನಿಮಾ RRR ಸಿನಿಮಾ ಕುತೂಹಲ ಕೆರಳಿಸಿಲ್ಲಾ. ಅಷ್ಟು ಕ್ರೇಜಿನಾ ನಮ್ಮ ಕನ್ನಡ ಸಿನಿಮಾ ಪ್ರೇಕ್ಷಕರಲ್ಲಿ ಮೋಡಿಸಿದೆಯಂತೆ ಹೇಳಿದ್ರು ಅತಿಶಯೋಕ್ತೆನಲ್ಲ.ಇದು ಕನ್ನಡದ ಹೆಮ್ಮೆಯ ಚಿತ್ರ.
೩)ಅದ್ವೈತ್ ಚಂದನ್ ನಿರ್ದೇಶನದ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಹಿಂದಿ ಚಿತ್ರ ಕೂಡ ಸ ಭಾರತದ ಪ್ರಮುಖ ೧೦ ಸಿನಿಮಾಗಳಲ್ಲಿ ಒಂದಾಗಿದೆ. ಈ ಸಿನಿಮಾ ಫಾರೆಸ್ಟ್ ಗಂಪ್ ಎಂಬ ಹಾಲಿವುಡ್ ಸಿನಿಮಾದ ಮೂಲ ಕಥೆಯಿಂದ ಮಾಡಲಾಗಿದೆ. ಈ ಸಿನಿಮಾ ಕೂಡ ಕೆ.ಜಿ.ಎಫ್ -೨ ಸಿನಿಮಾ ಬಿಡುಗಡೆಯಾಗುವ ದಿನದಂದೆ ತೆರೆಗೆ ಬರಲು ದಿನಾಂಕ ವನ್ನು ಘೋಸಿದೆ. ಆದ್ರೆ ಈ ಸಿನಿಮಾ ಕೆ.ಜಿ.ಏಫ್ -೨ ಚಿತ್ರದ ಮುಂದೆ ಮಕಾಡೆ ಮಲಗುತ್ತೆ, ಹಿಂದೆ ಶಾರುಖಾನ್ ಜೀರೊ ಸಿನಿಮಾ ಥರ ಅಮೀರ್ ಖಾನ್ ಸಿನಿಮಾ ಸೋಲುತ್ತೆ ಆಂತ ಕೆಲವು ಸಿನಿಮಾ ವಿಮರ್ಶಕರಿಂದ ಮಾಹಿತಿ ಹರಿದಾಡುತ್ತಿದೆ.
೪) ಮತ್ತೊಂದು ಬಹು ನಿರೀಕ್ಷಿತ ಚಿತ್ರ ,ಬಾಲಿವುಡ್‌ನ ಕ್ಲಾಸ್ ನಿರ್ದೇಶಕರಂದೆ ಚಿರಪರಿಚಿತರಾದ ಸಂಜಯ್ ಲೀಲಾ ಬನ್ಸಾಯಿ ಅವರು ನಿರ್ದೇಶನದ ಗಂಗುಬಾಯಿ ಕಥೈವಾಡಿ ಸಿನಿಮಾ ಮುಂದಿನ ವರ್ಷ ಆಗಷ್ಟ್ ವೇಳೆಗೆ ತೆರೆಗೆ ಬರಲಿದೆ ಅಂತ ಮೂಲಗಳು ತಿಳಿಸಿವೆ
೫) ಬಾಹುಬಲಿ ಪ್ರಭಾಸ್ ಹಾಗೂ ದಕ್ಷಿಣದ ಸ್ವೀಟ್ ಕ್ವೀನ್ ಪೂಜ ಹೆಗಡೆ ಅಭಿನಯದ, ಹಾಗೂ ರಾಧ ಕೃಷ್ಣ ಕುಮಾರ್ ನಿರ್ದೇಶನದ ತೆಲುಗಿನ ರಾಧೆ ಶ್ಯಾಮ್ ಚಿತ್ರ ಸಹ ಮುಂದಿನ ವರ್ಷ ಬೆಳ್ಳಿಗೆ ತೆರಿಗೆ ಬರಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದು ಜನವರಿ ೧೫ ,೨೦೨೧ ಬಿಡುಗಡೆ ಯಾಗಲಿದೆ.
೬) ತಮಿಳಿನ ವಿಜಯ್ ಅಭಿನಯದ ಮತ್ತು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಆಕ್ಷನ್ ಮಾಸ್ ಎಂಟರ್ ಟೈನ್ಮೆಂಟ್ ಸಿನಿಮಾ ಬೇಸ್ಟ್ ಕೂಡ ಭಾರತದ ಪ್ರಮುಖ ೧೦ ಸಿನಿಮಾಗಳಲ್ಲಿ ಒಂದು. ಈ ಸಿನಿಮಾ ಮುಂದಿನ ಆಗಷ್ಟ್ ವೇಳೆಗೆ ತೆರಿಗೆ ಬರಲು ಸಿದ್ದಾವಾಗುತಿದೆ.
೭) ಬಾಲಿವುಡ್ ನ ಸೂಪರ್ ಸ್ಟಾರ್ ಲೇಡಿ ಎಂದೆ ಗುರುತಿಸಲ್ಪಡುವ ಕಂಗನಾ ರಾಣವತ್ ಅಭಿನಯದ ಮತ್ತು ರಜನೀತ್ ರಾಜ್ ಗಾಯ್ ನಿರ್ದೇಶನದ ದಾಕಾಡ್ ಹಿಂದಿಚಿತ್ರ ಸಹ ಮುಂದಿನ ಬಹು ನಿರೀಕ್ಷಿತ ೧೦ ಸಿನಿಮಾಗಳಲ್ಲಿ ೭ ನೇಯದಾಗಿದೆ. ಈ ಚಿತ್ರ ನ ಅರ್ಜುನ ರಾಮ್ ನಿರ್ದೇಶನ ಮಾಡಿದ್ದಾರೆ.
೮) 14 ನೇ ದಿನಾಂಕ ದಂದು ಬಿಡುಗಡೆಗೊಂಡ ವಾಲಿಮೈ ತಮಿಳಿನ ಆಕ್ಷನ್ ಥ್ರಿಲ್ಲರ್ ಚಿತ್ರ ದ ಮೇಕಿಂಗ್ ವಿಡಿಯೋ ಬಾರಿ ಸದ್ದು ಮಾಡುತ್ತಿದೆ. ತಮಿಳಿನ ಅಜಿತ್ ಕುಮಾರ್ ಅಭಿನಯದ, ಹಾಗೂ ಬೋನಿ ಕಪೂರ್ ಮತ್ತು ಜಿ ಸ್ಟುಡಿಯೋ ಜಂಟಿಯಾಗಿ ಈ ಚಿತ್ರ ನಾ ನಿರ್ಮಾಣ ಮಾಡುತ್ತಿವೆ. ಈ ಸಿನಿಮಾ ಸಹ ಮುಂದಿನ ವರ್ಷ ೨೦೨೨ ಸಂಕ್ರಾತಿ(ಪೊಂಗಲ್) ಗೆ ತೆರಿಗೆ ಬರಲು ಘೋಸಿಸಿದೆ.ಇದು ಹಳೆ ಸಿನಿಮಾ ವಾದ್ರು ಮುಂದಿನ ವರ್ಷ ಬಿಡುಗಡೆ ಆಗುತ್ತಿದೆ.
೯) ಪ್ರಭಾಶ್ ಅಭಿನಯದ ಇನ್ನೊಂದು ಚಿತ್ರ ವಾದ ,ಮೈಥಾಲಾಜಿಕಲ್ ಸಿನಿಮಾ ರಾಮಾಯಣ ಕಥಾವಸ್ತು ಹೊಂದಿರುವ " ಆದಿಪುರುಷ " ಚಿತ್ರ ೨೦೩೩ ಆಗಷ್ಟ್ ೧೧ ಕ್ಕೆ ಬಿಡುಗಡೆಗೆ ಸಿದ್ದಾವಾಗುತ್ತಿದೆ. ಈ ಚಿತ್ರ ನಾ ಓಂ ರಾತ್ ಅವರು ನಿರ್ದೇಶನ ಮಾಡಿದ್ದು ಪ್ರಮುಖವಾಗಿ ಪ್ರೇಕ್ಷಕರು ಕಾಯುತ್ತಿರುವ ೧೦ ಪ್ರಮುಖ ಚಿತ್ರ ಗಳಲ್ಲಿ ಇರ್ದು ನೇಯದಾಗಿದ್ದು ಕುತುಹಲಾವನ್ನು ಕೆರಳಿಸಿದೆ.
೧೦)ಕೊನೆಯದಾಗಿ ಲೋಕೇಶ್ ಕನಗರಾಜ್ ನಿರ್ದೇಶನ ದ , ಕಮಲ್ ಹಾಸನ್ ಅಭಿನಯದ ಮತ್ತೊಂದು ಬಹು ನಿರೀಕ್ಷಿತ ಚಿತ್ರವಾದ " ವಿಕ್ರಮ್ " ಸಿನಿಮಾ ಕೂಡ ತೆರಿಗೆ ಬರಲು ಪ್ರೇಕ್ಷಕರು ಕಾಯುವಂತೆ ಮಾಡಿದೆ. ಇದಕ್ಕೆ ಕಾರಣ ಈ ಹಿಂದೆ ಲೋಕೇಶ್ ಕನಗರಾಜ್ ಖೈದಿ ಎಂಬ ಬ್ಲಾಕ್ ಬ್ಲಾಸ್ಟರ್ ಸಿನಿಮಾ ಕೊಟ್ಟಿದ್ದಾರೆ. ಹಾಗೂ ಭಾರತದ ಬಹುಮುಖ ಪ್ರತಿಭೆ ಎಂದೆ ಪ್ರಸಿದ್ದಾರಾದ ಕಮಲ್ ಹಾಸನ್ ಅವರಿಗೆ ಆಕ್ಷನ್ - ಕಟ್ ಹೇಳಲು ಅವಕಾಶ ಗಿಟ್ಟಿಸಿದ್ದರಿಂದ ಇವರಿಬ್ಬರ ಆಕ್ಷನ್-ಥ್ರಿಲ್ಲರ್ ಕಾಂಬೋ ಪ್ರೇಕ್ಷಕರ ನ್ನು ಮ್ಯಾಜಿಕ್ ಮಾಡುವುದರಲ್ಲಿ ಅನುಮಾನ ವಿಲ್ಲಾ ಅಂತ ಇತ್ತೀಚಿಗೆ ಬಿಡುಗಡೆ ಆದ ಟೀಜರ್ ನಮಗೆ ತೋರಿಸುತ್ತೆ. ಅಂದಹಾಗೆ ಲೋಕೇಶ್ ಕನಗರಾಜ್ ಯಾವ ಸಿನಿಮಾ ಗೆ ಅಸಿಸ್ಟೆಂಟ್ ಡೈರೆಕ್ಟರ್ ಮತ್ತು ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡದೆ ,ಸೂಪರ್- ಡೂಪರ್ ಚಿತ್ರ ಮಾಡಿ ಗೆಲ್ಲ ಬಹುದೆಂದು ತೋರಿಸಿಕೊಟ್ಟ ಅಪರೂಪದ ನಿರ್ದೇಶಕ. ಒಟ್ಟಿನಲ್ಲಿ ಕೋರೋನಾ ದಿಂದ ಹಿನ್ನೆಲೆಯಲ್ಲಿದ್ದ ಹಲವು ಸಿನಿಮಾ ಗಳು ಮುನ್ನಲೆಗೆ ಬಂದು ಮುಂದಿನ ವರ್ಷ ೨೦೨೨ ರಲ್ಲಿ ಬಿಡುಗಡೆ ಆಗಲಿವೆ , ಈ ೧೦ ಸಿನಿಮಾ ಗಳು ಪ್ರೇಕ್ಷಕರಗೆ ವರ್ಷ ಪೂರ್ತಿ ಮನರಂಜನೆ ನೀಡುವದರಲ್ಲಿ ಯಾವ ಅನುಮಾನವು ಬೇಡ.
ಇದೆಥರ ಯಾವುದೇ ಸಿನಿಮಾ ವಿಮರ್ಶೆ ಮತ್ತು ಸುದ್ದಿಗಾಗಿ https://maarjundoni.blogspot.com/?m=1
ಬ್ಲಾಗ್ ಅನ್ನು ಲೈಕ್, ಸಬ್ಸ್ ಕ್ರೈಬ್ ಮಾಡುವ ಮಾಲಕ ಸಂಪರ್ಕಿಸಿ ಮತ್ತು ಬೆಂಬಲಿಸಿ.
M.A. Arjundoni ( Film Script writer And Analyst )
ನಿಮ್ಮ ಎಮ್. ಎ. ಅರ್ಜುನ ಡೋಣಿ ( ಸಿನಿಮಾ ಬರಹಗಾರ ಮತ್ತು ಸ್ಕ್ರಿಪ್ಟ್ ಅನಾಲಿಸ್ಟ್ )
Comments
Post a Comment